Monday, December 23, 2024

19 ಸೀಟು ಬಂದಿರೋದಕ್ಕೆ ಇಷ್ಟು ಮಾತಾಡ್ತಾರೆ, ಇನ್ನೂ ನಾವು : ಕೆ.ಜೆ. ಜಾರ್ಜ್ ಲೇವಡಿ

ಹಾಸನ : 19 ಸೀಟ್ ಬಂದಿರೋದಕ್ಕೆ ಕುಮಾರಸ್ವಾಮಿ ಇಷ್ಟು ಮಾತನಾಡ್ತಾರೆ. ನಾವು 136 ಸೀಟು ಬಂದವರು ಎಷ್ಟು ಮಾತನಾಡಬೇಕಾಗುತ್ತದೆ. ಜನ ನಮ್ಮ ಪರವಾಗಿದ್ದಾರೆ, ಜನ ನಮಗೆ ಬೆಂಬಲ  ಕೊಡ್ತಾರೆ. ಅವರು ಮಾತನಾಡೋದು ಅವರಿಗೆ ಬಿಟ್ಟದ್ದು, ನಾವು ಅದನ್ನು ಸ್ಟಾಪ್ ಮಾಡೋದಕ್ಕೆ ಆಗಲ್ಲ ಎಂದು ಇಂಧನ ಸಚಿವ ಕೆ.ಜೆ‌. ಜಾರ್ಜ್ ಲೇವಡಿ ಮಾಡಿದ್ದಾರೆ.

ಕಾಂಗ್ರೆಸ್​ ಸರ್ಕಾರಕ್ಕೆ ಆರು ತಿಂಗಳು‌ ಆಯಸ್ಸು ಎಂಬ ಕುಮಾರಸ್ವಾಮಿ ಹೇಳಿಕೆಗೆ ಹಾಸನದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿಯವರು ಯಾವ ಪಕ್ಷದಲ್ಲಿದ್ದಾರೆ? ಅವರು ನಮ್ಮ ಸರ್ಕಾರವನ್ನು ಉಳಿಸೋದಕ್ಕೆ ಪ್ರಯತ್ನ ಮಾಡ್ತಾರಾ? ಎಂದು ಪ್ರಶ್ನೆ ಮಾಡಿದ್ದಾರೆ.

ಇಳಿಸೋದಕ್ಕೆ ಪ್ರಯತ್ನ ಮಾಡೋದು, ವಿರೋಧ ಪಕ್ಷದಲ್ಲಿದ್ದಾರೆ. ಅವರ ಕೆಲಸನೇ ಅದು ತಾನೆ. ಅಟ್ಲೀಸ್ಟ್ ಜನರಿಗೆ ಹೋಪ್ ಕೊಡಬೇಕಲ್ಲ ನಾವು ಮತ್ತೆ ಬರ್ತೀವಿ ಅಂತ. ಐದು ತಿಂಗಳು ಕಾಯ್ತೇವೆ ಅಂತ ವಿರೋಧ ಪಕ್ಷದವರು ಹೇಳ್ತಾರಾ? ಇನ್ನೂ ಎಲೆಕ್ಷನ್ ಆಗಲಿಲ್ಲ, ಎಷ್ಟು ಬಂದಿದೆ ಅವರಿಗೆ?ಎಂದು ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಪಕ್ಷವೇ ಒಂದು ಜಾತಿ

ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಬಳಿಕ ಅಲ್ಪಸಂಖ್ಯಾತ ನಾಯಕರು ಕಾಂಗ್ರೆಸ್​ ಪಕ್ಷದತ್ತ ವಲಸೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಜಾತಿ ಇಲ್ಲ, ಕಾಂಗ್ರೆಸ್ ಪಕ್ಷವೇ ಒಂದು ಜಾತಿ. ನಮ್ಮಲ್ಲಿ ಲಿಂಗಾಯತ, ಒಕ್ಕಲಿಗರು, ದಲಿತರು, ಹಿಂದುಳಿದವರು, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲರೂ ಇದ್ದಾರೆ. ಎಲ್ಲಾ ಜಾತಿಯ ಜನರು ಇರೋ ಏಕೈಕ ಪಕ್ಷ ಇಂಡಿಯಾದಲ್ಲಿ ಕಾಂಗ್ರೆಸ್ ಒಂದೇ ಎಂದು ಹೇಳಿದ್ದಾರೆ.

ಎಲ್ಲಾ ಕಾಂಗ್ರೆಸ್ ಪಕ್ಷದತ್ತ ಬರ್ತಿದ್ದಾರೆ

ಜಾತಿ ಮೇಲೆ ನಾವು ರಾಜಕಾರಣ ಮಾಡುವುದಿಲ್ಲ. ಜೆಡಿಎಸ್​​ನವರು ಜಾತ್ಯಾತೀತ ಅನ್ನೋದನ್ನು ಬಿಟ್ಟ ಬಳಿಕ ಕೇವಲ ಅಲ್ಪ ಸಂಖ್ಯಾತ ಮಾತ್ರ ಅಲ್ಲ, ಎಲ್ಲಾ ಸಮುದಾಯದವರು ಕಾಂಗ್ರೆಸ್ ಪಕ್ಷದತ್ತ ಬರ್ತಿದ್ದಾರೆ. ದೇಶದಲ್ಲಿ ಬಹುಸಂಖ್ಯಾತ ಜನರು ಜಾತ್ಯಾತೀತ ತತ್ವದಲ್ಲಿ ನಂಬಿಕೆ ಇಟ್ಡಿದಾರೆ. ಜೆಡಿಎಸ್ ನಡೆ ಅವರಿಗೆಲ್ಲಾ ಬೇಸರ ತರಿಸಿದೆ. ಏನಪ್ಪಾ ಇವರು ಜಾತ್ಯಾತೀತ ಹೆಸರಿಟ್ಟುಕೊಂಡು ಈ ರೀತಿ ಮಾಡೋದು ಸರಿಯಲ್ಲ ಅನ್ನುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

RELATED ARTICLES

Related Articles

TRENDING ARTICLES