Wednesday, January 22, 2025

‘ಫೈಟರ್’ಗೆ ಗಜ ಬಲ : ಟೈಗರ್ ಪ್ರಭಾಕರ್ ನೆನೆದು ದರ್ಶನ್ ಹೇಳಿದ್ದೇನು?

ಬೆಂಗಳೂರು : ವಿನೋದ್​ ಪ್ರಭಾಕರ್​ ನಟನೆಯ ಫೈಟರ್ ಸಿನಿಮಾ ಬಿಗ್ ಸ್ಕ್ರೀನ್ ಎಂಟ್ರಿಗೆ ಕೌಂಟ್​ಡೌನ್ ಶುರುವಾಗಿದೆ. ಮರಿ ಟೈಗರ್​ಗೆ ಡಿ ಬಾಸ್ ದರ್ಶನ್ ಸಾಥ್ ನೀಡಿದ್ದು, ಮುಕ್ತ ಮನಸ್ಸಿನಿಂದ ಹರಸಿ ಹಾರೈಸಿದ್ದಾರೆ. ಇದರಿಂದ ಫೈಟರ್​ಗೆ ಗಜ ಬಲ ಬಂದಂತಾಗಿದೆ.

  • ‘ಫೈಟರ್’​ಗೆ ಗಜ ಬಲ.. ಕುಚಿಕು ಗೆಳೆಯನಿಗೆ ಡಿ ಬಾಸ್ ಸಾಥ್!
  • ಟೈಗರ್ ಪ್ರಭಾಕರ್​ರನ್ನ ನೆನೆದ ದಾಸ ದರ್ಶನ್ ಹೇಳಿದ್ದೇನು?
  • ರಾಬರ್ಟ್​ನಲ್ಲಿ ಒಟ್ಟಿಗೆ ಬಣ್ಣ ಹಚ್ಚಿದ್ದ ಆತ್ಮೀಯ ಗೆಳೆಯರು
  • ರಾಜ್ಯಾದ್ಯಂತ ಫೈಟರ್ ಎಂಟ್ರಿಗೆ ದಿನಗಣನೆ.. ಅ.6ಕ್ಕೆ ರಿಲೀಸ್

ಫೈಟರ್ ಸಿನಿಮಾ ಔಟ್ ಅಂಡ್ ಔಟ್ ಕಮರ್ಷಿಯಲ್ ಎಂಟರ್​ಟೈನರ್. ಇದೇ ಅಕ್ಟೋಬರ್ 6ಕ್ಕೆ ರಾಜ್ಯಾದ್ಯಂತ ಗ್ರ್ಯಾಂಡ್ ರಿಲೀಸ್ ಆಗುತ್ತಿದೆ. ಈಗಾಗಲೇ ರಿಲೀಸ್​ ಆಗಿರುವ ಟ್ರೈಲರ್ ಹಾಗೂ ಸ್ಯಾಂಪಲ್ಸ್​ನಿಂದ ಅತೀವ ನಿರೀಕ್ಷೆ ಹುಟ್ಟಿಸಿದೆ. ಅದರಲ್ಲೂ ಮರಿ ಟೈಗರ್ ವಿನೋದ್ ಪ್ರಭಾಕರ್ ಲೀಡ್​​ನಲ್ಲಿರೋ ಫೈಟರ್, ಸಾಕಷ್ಟು ಅಂಶಗಳಿಂದ ನೋಡುಗರನ್ನು ಆಕರ್ಷಿಸುತ್ತಿದೆ.

ಫೈಟರ್ ಮೇಲಿನ ನಿರೀಕ್ಷೆ ಡಬಲ್

ಒಂದುಕಡೆ ಕಾಲೇಜ್ ಡೇಸ್ ಇರುವ ಯೂತ್​ಫುಲ್ ಅಂಶಗಳು. ಮತ್ತೊಂದೆಡೆ ರೈತರ ಕುರಿತ ಸಮಸ್ಯೆಗಳು. ಇನ್ನೊಂದೆಡೆ ಗ್ಲಾಮರ್ ಹೆಚ್ಚಿಸೋಕೆ ಅಂತ ಇಬ್ಬರಿಬ್ಬರು ನಟಿಯರು. ಗುರು ಕಿರಣ್ ಮ್ಯೂಸಿಕ್, ಥ್ರಿಲ್ಲರ್ ಮಂಜು ಫೈಟ್ಸ್ ಸೇರಿದಂತೆ ರಾಜ್ ದೀಪಕ್ ಶೆಟ್ಟಿ ವಿಲನಿಸಂ ಚಿತ್ರದ ಸ್ಟ್ರೆಂಥ್ ಹೆಚ್ಚಿಸಿದೆ. ಅಲ್ಲದೆ, ನೂತನ್ ಉಮೇಶ್ ಅವ್ರು ಕಥೆಯನ್ನ ಹೆಣೆದು, ಸಿನಿಮಾನ ಕಟ್ಟಿಕೊಟ್ಟಿರೋ ಪರಿ, ಕಟ್ಟಿಗೇನಹಳ್ಳಿ ಸೋಮಶೇಖರ್ ನಿರ್ಮಾಣದಲ್ಲಿ ತಯಾರಾದ ಈ ಚಿತ್ರದ ಪ್ರೊಡಕ್ಷನ್ ವ್ಯಾಲ್ಯೂಸ್ ವ್ಹಾವ್ ಫೀಲ್ ತರಿಸುತ್ತೆ.

ಮರಿ ಟೈಗರ್​ಗೂ ನಿಮ್ಮ ಪ್ರೋತ್ಸಾಹ ಇರಲಿ

ಟೀಸರ್, ಸಾಂಗ್ಸ್ ಹಾಗೂ ಟ್ರೈಲರ್​ನಿಂದ ಸೌಂಡ್ ಮಾಡ್ತಿದ್ದ ಫೈಟರ್, ಇದೀಗ ಡಿ ಬಾಸ್ ದರ್ಶನ್​ರ ಹೊಗಳಿಕೆಯಿಂದ ಗಜ ಬಲ ಪಡೆದುಕೊಂಡಿದೆ. ನಟ ದರ್ಶನ್ ತಮ್ಮ ಆತ್ಮೀಯ ಕುಚಿಕು ಗೆಳೆಯನ ಫೈಟರ್ ಸಿನಿಮಾಗೆ ತುಂಬು ಹೃದಯದಿಂದ ಹರಸಿ, ಹಾರೈಸಿದ್ದಾರೆ. ಟೈಗರ್ ಪ್ರಭಾಕರ್ ಅವರನ್ನು ಫೈಟರ್ ಆಗಿದ್ದಾಗಿಂತ ಬಹುಭಾಷಾ ಸೂಪರ್ ಸ್ಟಾರ್ ಮಾಡಿದ ಹಾಗೆ ಮರಿ ಟೈಗರ್​ಗೂ ನಿಮ್ಮ ಪ್ರೋತ್ಸಾಹ ಇರಲಿ ಎಂದು ದಚ್ಚು ಮನವಿ ಮಾಡಿದ್ದಾರೆ.

ಇವರಿಬ್ಬರೂ ಒಟ್ಟಿಗೆ ರಾಬರ್ಟ್​ ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದರು. ಬ್ರದರ್ ಫ್ರಮ್ ಅನದರ್ ಮದರ್ ಅನ್ನೋದನ್ನ ಚಿತ್ರದ ಮೂಲಕವೂ ಸಾರಿದ್ದರು. ಮತ್ತೊಮ್ಮೆ ತೆರೆಹಂಚಿಕೊಳ್ಳಲಿರೋ ಈ ಜೋಡಿ ಸದ್ಯದಲ್ಲೇ ಗುಡ್​ನ್ಯೂಸ್ ನೀಡಲಿದೆ.

  • ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES