Wednesday, January 22, 2025

ಸಿಎಂ ಸಿದ್ದರಾಮಯ್ಯ ಮತಾಂಧ : ಶಾಸಕ ಯತ್ನಾಳ್

ಬೆಂಗಳೂರು : ಕಾವೇರಿ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಧ್ಯ ಪ್ರವೇಶ ಮಾಡುವಂತೆ ಕೇಳ್ತಿರಲ್ವಾ? ಹಾಗಾದರೆ, ಶಿವಮೊಗ್ಗ ಗಲಾಟೆ ವಿಷಯಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವ​ರನ್ನು ಕರೆದುಕೊಂಡು ಬರೋಣ್ವಾ? ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​​ ಪ್ರಶ್ನಿಸಿದ್ದಾರೆ.

ಬೆಂಗಳೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಮನೆಯಲ್ಲಿ ಈರುಳ್ಳಿ ಹಚ್ಚಲು ಚಾಕು, ಚೂರಿ ಇಟ್ಟುಕೊಂಡಿರುವುದಿಲ್ಲ. ​​ಔರಂಗಜೇಬ್​​ ಎಂದೂ ಶಿವಾಜಿ ಎದುರು ಬರಲಿಲ್ಲ. ರಾಣಾ ಪ್ರತಾಪ್‌ ಹೆಸರು ಕೇಳಿದರೆ ಅಕ್ಬರ್ ಚಡ್ಡಿಯಲ್ಲೇ ಮೂತ್ರ ವಿಸರ್ಜನೆ ಮಾಡಿಕೊಳ್ಳುತ್ತಿದ್ದ ಎಂದು ವಾಗ್ದಾಳಿ ನಡೆಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಎಂತಹ ಮತಾಂಧ ಎಂದರೆ ತಮ್ಮ ಸಮುದಾಯದ ಪೇಟ ಹಾಕಲು ರೆಡಿ ಇಲ್ಲ. ಆದರೆ, ಮುಸ್ಲಿಮರ ಬಟ್ಟೆ ಹಾಕಿಕೊಂಡು ಡ್ಯಾನ್ಸ್ ಮಾಡುತ್ತಾರೆ ಎಂದು ಲೇವಡಿ ಮಾಡಿದ ಯತ್ನಾಳ್, ಇನ್ನು ಇದೇ ರೀತಿ ಉದ್ಧಟತನ ಮುಂದುವರಿಸಿದರೆ ಹಿಂದೂಗಳು ಸುಮ್ಮನೆ ಕೂರುವುದಿಲ್ಲ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಮತಾಂಧ ಸ್ಲೀಪರ್‌ ಸೆಲ್‌ಗಳು ಜಾಗೃತ

ಕರ್ನಾಟಕದಲ್ಲಿ ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ರಾಜ್ಯಾದ್ಯಂತ ಮತಾಂಧ ಸ್ಲೀಪರ್‌ ಸೆಲ್‌ಗಳು ಜಾಗೃತಗೊಂಡಿವೆ. ಆಳುವ ಸರ್ಕಾರ ತನ್ನ ಮತಬ್ಯಾಂಕ್‌ಗಾಗಿ ಮಾಡುತ್ತಿರುವ ಷಡ್ಯಂತ್ರಕ್ಕೆ ಶಿವಮೊಗ್ಗ ಮಾತ್ರವೇ ಬಲಿಯಾಗಿಲ್ಲ, ರಾಜ್ಯದ ಉಳಿದೆಡೆ ಕಾಂಗ್ರೆಸ್‌ ಮಾಡುತ್ತಿರುವ ಮತಾಂಧ ರಾಜಕಾರಣದ ಅಪಾಯಗಳನ್ನು ಈ ವಿಡಿಯೋ ಕಟ್ಟಿಕೊಟ್ಟಿದೆ ಎಂದು ರಾಜ್ಯ ಬಿಜೆಪಿ ಕುಟುಕಿದೆ.

RELATED ARTICLES

Related Articles

TRENDING ARTICLES