ಬೆಂಗಳೂರು : ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್-2023ನಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದೆ. ಟೋಕಿಯೊ ಒಲಿಂಪಿಕ್ ಪದಕ ವಿಜೇತೆ ಲವ್ಲಿನಾ ಬೊರ್ಗೊಹೈನ್ ಇಂದು ಬೆಳ್ಳಿ ಪದಕ ಗೆದ್ದಿದಾರೆ.
ಇಂದು ನಡೆದ ಬಾಕ್ಸಿಂಗ್ ಸ್ಪರ್ಧೆಯ ಮಹಿಳೆಯರ 75 ಕೆಜಿ ವಿಭಾಗದ ಫೈನಲ್ನಲ್ಲಿ ಲೊವ್ಲಿನಾ ಬೊರ್ಗೊಹೈನ್, ಹಾಲಿ ವಿಶ್ವ ಚಾಂಪಿಯನ್ ಮತ್ತು ಎರಡು ಬಾರಿ ಒಲಿಂಪಿಕ್ ಪದಕ ವಿಜೇತ ಲಿ ಕಿಯಾನ್ ವಿರುದ್ಧ ಸೋಲು ಅನುಭವಿಸುವುದರೊಂದಿಗೆ ಬೆಳ್ಳಿಗೆ ತೃಪ್ತಿಪಟ್ಟರು.
ಇನ್ನು ಬಾಕ್ಸಿಂಗ್ ಸ್ಪರ್ಧೆಯ ಮಹಿಳೆಯರ 57 ಕೆ.ಜಿ ವಿಭಾಗದ ಸೆಮಿಫೈನಲ್‌ನಲ್ಲಿ ಪರ್ವೀನ್ ಹೂಡಾ ಎರಡು ಬಾರಿಯ ವಿಶ್ವ ಚಾಂಪಿಯನ್ ಚೈನೀಸ್ ತೈಪೆಯ ಲಿನ್ ಯು ಟಿಂಗ್ ವಿರುದ್ಧ ಸೋಲು ಅನುಭವಿಸುವುದರೊಂದಿಗೆ ಕಂಚಿಗೆ ತೃಪ್ತಿಪಟ್ಟರು.
ಫೈನಲ್ಗೆ ಭಾರತ
ಪುರುಷರ ಹಾಕಿ ಸೆಮಿಫೈನಲ್‌ನಲ್ಲಿ ಭಾರತ 5-3 ಗೋಲುಗಳಿಂದ ದಕ್ಷಿಣ ಕೊರಿಯಾವನ್ನು ಮಣಿಸಿದೆ. ಉಪನಾಯಕ ಹಾರ್ದಿಕ್ ಸಿಂಗ್ ಭಾರತಕ್ಕೆ ಮೊದಲ ಗೋಲು ಗಳಿಸಿಕೊಟ್ಟರೆ, ಮನದೀಪ್ ಸಿಂಗ್ ಎರಡನೇ ಗೋಲು ಬಾರಿಸಿದರು. ಲಲಿತ್ ಉಪಾಧ್ಯಯ ಮೂರನೇ ಗೋಲು ಬಾರಿಸಿದರು. ಅಮಿತ್ ರೋಹಿದಾಸ್ ನಾಲ್ಕನೇ ಗೋಲು ಗಳಿಸಿದರು. ಭಾರತ ಫೈನಲ್ನಲ್ಲಿ ಜಪಾನ್ ಅಥವಾ ಚೀನಾವನ್ನು ಎದುರಿಸಲಿದೆ. ಅಲ್ಲೂ ಗೆದ್ದರೆ ಮತ್ತೊಂದು ಚಿನ್ನದ ಪದಕ್ಕ ಒಲಿಯಲಿದೆ.