Wednesday, January 22, 2025

ಸರಸಕ್ಕೆ ಅಡ್ಡಿಯಾದನೆಂದು ಗಂಡನನ್ನೇ ಮುಗಿಸಿದ ಖತರ್ನಾಕ್ ಪತ್ನಿ

ಉತ್ತರಕನ್ನಡ ಜಿಲ್ಲೆ : ಮದುವೆಯಾಗಿದ್ದರೂ ಇಲ್ಲೊಬ್ಬ ವಿವಾಹಿತ ಮಹಿಳೆ ಪ್ರಿಯಕರೊಂದಿಗೆ ಅನೈತಿಕ ಸಂಬಂಧ ಬೆಳೆಸಿದ್ದಳು. ಆದರೆ, ತನ್ನ ಅನೈತಿಕ ಸಂಬಂಧಕ್ಕೆ ಗಂಡ ಅಡ್ಡಿಯಾಗಬಾರದೆಂದು ಪ್ರಿಯಕರನ ಕೈಯಲ್ಲಿ ಗಂಡನನ್ನೇ ಕೊಲೆ ಮಾಡಿಸಿದ್ದಾಳೆ.

ಕಾರವಾರದ ದೇವಿಮನೆ ಘಟ್ಟದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ ಪ್ರಕರಣಕ್ಕೆ ಬಹುದೊಡ್ಡ ಟ್ವಿಸ್ಟ್ ಸಿಕ್ಕಿದೆ. ಈ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ದೇವಿಮನೆ ಘಟ್ಟದಲ್ಲಿ ಬಶೀರ್​​ ಸಾಬ್ ಎಂಬಾತನನ್ನ ಕೊಲೆ ಮಾಡಲಾಗಿತ್ತು. ಪ್ರಕರಣದ ಬೆನ್ನತ್ತಿ ಹೋದ ಪೊಲೀಸರು ಆರೊಪಿಗಳನ್ನು ಬಂಧಿಸಿದ್ದು, ಮೃತ ಬಶೀರ್​ ಸಾಬ್​ನನ್ನ ಹೆಂಡತಿಯೇ ಕೊಲೆ ಮಾಡಿಸಿರುವುದು ತಿಳಿದುಬಂದಿದೆ.

ಆರೋಪಿ ಜೊತೆ ಅನೈತಿಕ ಸಂಬಂಧ‌

ಪತ್ನಿ ರಾಜಮಾ ಅನೈತಿಕ ಸಂಬಂಧಕ್ಕಾಗಿ ಪ್ರಿಯಕರನಿಂದಲೇ ಪತಿಯನ್ನು ಕೊಲೆ ಮಾಡಿಸಿರುವುದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ಪರಶುರಾಮ, ರವಿ, ರಾಜಮಾ,‌ ಬಸವರಾಜ‌ ಬಂಧಿತ ಆರೋಪಿಗಳು. ಬಂಧಿತ ಆರೋಪಿ ಪರಶುರಾಮ‌ ಜೊತೆ ರಾಜಮಾ ಅನೈತಿಕ ಸಂಬಂಧ‌ ಇಟ್ಟುಕೊಂಡಿದ್ದ‌ಳು. ಬಂಧಿತ ಆರೋಪಿಗಳು ಕೊಲೆ‌ ಮಾಡಿ‌ ಉತ್ತರಕನ್ನಡ ಜಿಲ್ಲೆಯ ದೇವಮನೆ ಘಟ್ಟದಲ್ಲಿ ಬಿಸಾಡಿ ಹೋಗಿದ್ದ‌ರು. ಆರೋಪಿಗಳ ಹೇಳಿಕೆ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

RELATED ARTICLES

Related Articles

TRENDING ARTICLES