ತುಮಕೂರು : ಅಡಿಕೆ ತುಂಬಿದ ಲಾರಿಯನ್ನು ವಾಣಿಜ್ಯ ತೆರಿಗೆ ಅಧಿಕಾರಿಗಳ ತಂಡ ಸೀಜ್ ಮಾಡಿ, 44 ಲಕ್ಷ ರೂ. ದಂಡ ವಿಧಿಸಿರುವ ಘಟನೆ ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ನಡೆದಿದೆ.
ಇದನ್ನು ವಿರೋಧಿಸಿ ರೈತರು ವಾಣಿಜ್ಯ ತೆರಿಗೆ ಕಚೇರಿ ಮುಂದೆ ಧರಣಿ ಮಾಡಿದ್ದಾರೆ. ಅಡಿಕೆ ತುಂಬಿದ ಲಾರಿ ಬಿಡದಿದ್ರೆ ವಿಷ ಕುಡಿಯುತ್ತೇವೆ ಎಂದು ವಿಷದ ಬಾಟಲ್ ಹಿಡಿದು ಪ್ರತಿಭಟನೆ ನಡೆಸಿದ್ದಾರೆ.
ರೈತರ ಅಡಿಕೆ ತುಂಬಿದ ಲಾರಿ ಗುಬ್ಬಿಯಿಂದ ಶಿವಮೊಗ್ಗಕ್ಕೆ ಹೋಗುತ್ತಿತ್ತು. ತಿಪಟೂರು ವಾಣಿಜ್ಯ ತೆರಿಗೆ ಅಧಿಕಾರಿಗಳು ಲಾರಿಗೆ ದಂಡ ವಿಧಿಸಿದ್ದಾರೆ. ತಿಪಟೂರು ಗ್ರಾಮಾಂತರ ಠಾಣೆಯಲ್ಲಿ 15 ದಿನಗಳಿಂದ ಅಡಿಕೆ ತುಂಬಿದ ಲಾರಿ ನಿಂತಿದೆ. ದಂಡ ವಜಾ ಮಾಡಿ ಲಾರಿ ಬಿಡುವಂತೆ ರೈತರು ಹೋರಾಟ ನಡೆಸಿದ್ದಾರೆ. ವಿಷದ ಬಾಟೆಲ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.