Saturday, May 18, 2024

ಆನೆಗಳ ಕಾಡಿಗಟ್ಟಲು ಡ್ರೋನ್ ತಂತ್ರಜ್ಞಾನ ಬಳಕೆ!

ಮಂಡ್ಯ : ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಮುಂದುವರಿದಿದ್ದು, ಆನೆಗಳ ಕಾಡಿಗಟ್ಟಲು ಡ್ರೋನ್ ತಂತ್ರಜ್ಞಾನ ಬಳಕೆ ಮಾಡಲಾಗಿದೆ.

ಒಂದು ವಾರದಿಂದ ನಾಡಿನಲ್ಲಿ 5 ಕಾಡಾನೆಗಳು ಬೀಡು ಬಿಟ್ಟಿವೆ. ಆನೆಗಳನ್ನ ವಾಪಸ್ ಕಾಡಿಗಟ್ಟಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ನಿನ್ನೆ ರಾತ್ರಿಯಿಂದ ಡ್ರೋಣ್ ಸಹಾಯದಿಂದ ಕಾರ್ಯಾಚರಣೆ ನಡೆಸಿದ್ದಾರೆ.

ಇದನ್ನೂ ಓದಿ: ಮೆಟ್ರೋ ಸಂಚಾರ ವ್ಯತ್ಯಯ: ಸಿಬ್ಬಂದಿ ವಿರುದ್ದ ಪ್ರುಯಾಣಿಕರು ವಾಗ್ವಾದ!

ಡ್ರೋಣ್ ಬಳಕೆ ಮಾಡಿ ಮುಂಜಾನೆ 5 ಗಂಟೆಯವರೆಗೆ ಕಾರ್ಯಾಚರಣೆ ನಡೆಸಿದ್ದು, ರಾತ್ರಿ ಇಡೀ ಕಾರ್ಯಾಚರಣೆಯಿಂದ 8 ಕಿಮೀ ದೂರದಷ್ಟು ಕಾಡಾನೆಗಳು ಸಾಗಿದ್ದಾವೆ. ಸಂಜೆ 6 ಗಂಟೆ ಬಳಿಕ ಅರಣ್ಯ ಇಲಾಖೆ ಮತ್ತೆ ಕಾರ್ಯಾಚರಣೆ ಆರಂಭಿಸಲಿದೆ. ಚಿಕ್ಕಮಂಡ್ಯದಿಂದ ಬೂದನೂರು ಕಡೆಗೆ ಕಾಡಾನೆಗಳ ಹಿಂಡು ತಲುಪಿವೆ.

RELATED ARTICLES

Related Articles

TRENDING ARTICLES