Wednesday, January 22, 2025

ನಿದ್ದೆ ಮಾತ್ರೆ ಕೊಡದಿದ್ದಕ್ಕೆ ಮೆಡಿಕಲ್ ಶಾಪ್ ಪುಡಿ ಪುಡಿ!

ದಾವಣಗೆರೆ : ನಿದ್ದೆ ಮಾತ್ರೆ (Sleeping Pills) ಕೊಡಲಿಲ್ಲ ಎಂಬ ಕಾರಣಕ್ಕೆ ಯುವಕರು ಮೆಡಿಕಲ್ ಶಾಪ್‌ (Medical Shop) ಗಾಜು, ಸಾಮಾಗ್ರಿ ಒಡೆದು ಹಾಕಿ ಗಲಾಟೆ ನಡೆಸಿರುವ ಘಟನೆ ದಾವಣಗೆರೆ (Davanagere) ಜಿಲ್ಲೆ ಹರಿಹರ (Harihara) ಪಟ್ಟಣದಲ್ಲಿ ನಡೆದಿದೆ.

ನಿದ್ದೆ ಮಾತ್ರೆ ಕೊಡಲು ವೈದ್ಯರ ಚೀಟಿ ಕೊಡಿ ಎಂದು ಶಾಪ್ ಮಾಲೀಕ ಕೇಳಿದ್ದಾನೆ. ವೈದ್ಯರ ಚೀಟಿ ಇದ್ದರೆ ಮಾತ್ರ ನಿದ್ದೆ ಮಾತ್ರೆ ಕೊಡುವುದಾಗಿ ಶಾಪ್ ಮಾಲೀಕ ಅಮಾನುದ್ದೀನ್ ಹೇಳಿದ್ದಾನೆ. ಇದರಿಂದ ಸಿಟ್ಟಿಗೆದ್ದು ಮೆಡಿಕಲ್ ಶಾಪ್ ಪುಡಿ ಪುಡಿ ಮಾಡಿದ್ದಾರೆ.

ಆಯುಧಗಳೊಂದಿಗೆ ಆಗಮಿಸಿ ದಾಂಧಲೆ ಮಾಡಿದ್ದಾರೆ. ಅಹಮ್ಮದ್, ಆಸೀಫ್, ಖಾಲಿದ್, ಸಿದ್ದಿಖ್ ಚಾರ್ಲಿ ಎಂಬುವವರಿಂದ ಹಲ್ಲೆ ಮಾಡಲಾಗಿದೆ. ಅಂಗಡಿ ಗಾಜು, ಸಾಮಾಗ್ರಿ ಒಡೆದು ಹಲ್ಲೆ ಮಾಡಿದ್ದಾರೆ. ಸಾರ್ವಜನಿಕರ ಸಹಾಯದಿಂದ ಬೆನ್ನಟ್ಟಿ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಹರಿಹರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES