Saturday, November 2, 2024

ಐದು ಗ್ಯಾರಂಟಿ ನಮ್ಮನ್ನು ಮಲಗಿಸಿ ಬಿಟ್ಟಿವೆ : ಕಾಂಗ್ರೆಸ್ ಶಾಸಕ ಷಡಕ್ಷರಿ

ತುಮಕೂರು : ಕಾಂಗ್ರೆಸ್​ ಪಕ್ಷದಲ್ಲಿ ಮತ್ತೆ ಅಸಮಾಧಾನ ಸ್ಫೋಟವಾಗಿದೆ. ಐದು ಗ್ಯಾರಂಟಿ ನಮ್ಮನ್ನು ಮಲಗಿಸಿ ಬಿಟ್ಟಿವೆ ಎಂದು ಸ್ವಪಕ್ಷದ ವಿರುದ್ಧವೇ ಕಾಂಗ್ರೆಸ್ ಶಾಸಕ ಕೆ. ಷಡಕ್ಷರಿ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಿಪಟೂರು ಪ್ರತ್ಯೇಕ ಜಿಲ್ಲೆ ಕನಸು ಸದ್ಯಕ್ಕೆ ನನಸಾಗೊದಿಲ್ಲ. ಸರ್ಕಾರದ ಐದು ಗ್ಯಾರಂಟಿಗಳು ನಮ್ಮನ್ನು ಮಲಗಿಸಿಬಿಟ್ಟಿವೆ ಎಂದು ಮಧುಗಿರಿ ಜಿಲ್ಲೆಯಾಗಬೇಕು ಎಂದು ಧ್ವನಿ ಎತ್ತಿದ ಸಚಿವರಾದ ಡಾ.ಜಿ. ಪರಮೇಶ್ವರ್ ಹಾಗೂ ಕೆ.ಎನ್. ರಾಜಣ್ಣ ಅವರ ನಡೆಗೆ ಬೇಸರಿಸಿದ್ದಾರೆ.

ಚಿಕ್ಕನಾಯಕನಹಳ್ಳಿ, ತುರುವೇಕೆರೆ, ಜೊತೆ ಅರಸೀಕೆರೆಯನ್ನ ಸೇರಿಸಿಕೊಂಡು ತಿಪಟೂರನ್ನ ಜಿಲ್ಲೆ ಮಾಡುವಂತೆ ಒತ್ತಾಯ ಮಾಡಿದ್ದೇನೆ. ಸಚಿವ ಕೆ.ಎನ್. ರಾಜಣ್ಣ ತಿಪಟೂರು, ಮಧುಗಿರಿ ಎರಡು ಜಿಲ್ಲಾ ಕೇಂದ್ರ ಮಾಡಿ ಎಂದು ಒತ್ತಾಯ ಮಾಡಿದ್ದಾರೆ. ತಿಪಟೂರು, ಮಧುಗಿರಿ ಜಿಲ್ಲಾ ಕೇಂದ್ರ ರಚನೆ ಬಗ್ಗೆ ಸಿಎಂ ಸಿದ್ದರಾಮಯ್ಯ ಪರಿಶೀಲಿಸಿ ಅಂತ ಹೇಳಿದ್ದಾರೆ ಎಂದು ಷಡಕ್ಷರಿ ಹೇಳಿದ್ದಾರೆ.

ಜಿಲ್ಲಾ ಕೇಂದ್ರದ ಕನಸು ಈಡೇರಲ್ಲ

ಪರಿಶೀಲಿಸಿ ಅಂದ್ರೆ ಆಗೋದಿಲ್ಲ ಸೂಕ್ತ ಕ್ರಮಕೈಗೊಳ್ಳಿ ಅಂದ್ರೆ ಮಾತ್ರ ಕಾರ್ಯ ರೂಪಕ್ಕೆ ಬರುತ್ತದೆ. ಬೆಳಗಾವಿ 18 ಕ್ಷೇತ್ರಗಳಿದೆ, ಅದು ಮೊದಲು ಆಗಬೇಕು. ತಿಪಟೂರು, ಮಧುಗಿರಿ ಜಿಲ್ಲಾ ಕೇಂದ್ರದ ಕನಸು ಸದ್ಯಕ್ಕೆ ಈಡೇರುವುದಿಲ್ಲ. ಸದ್ಯ ಬಜೆಟ್​​ಗಳಲ್ಲಿ ಹೊಸ ಜಿಲ್ಲೆ ಘೋಷಣೆ ಸಾಧ್ಯವಿಲ್ಲ ಎಂದು ಅಸಹಾಯಕತೆ ಪ್ರದರ್ಶಿಸಿದ್ದಾರೆ.

RELATED ARTICLES

Related Articles

TRENDING ARTICLES