Sunday, December 22, 2024

135 ಸೀಟು ಗೆದ್ದಿದ್ದೇವೆ ಎಂದು ಕಾಂಗ್ರೆಸ್​ಗೆ ಜಂಬ : ಡಾ.ಕೆ. ಅನ್ನದಾನಿ

ಮಂಡ್ಯ : 135 ಸೀಟು ಗೆದ್ದಿದ್ದೇವೆ ಎಂದು ಕಾಂಗ್ರೆಸ್ ನಾಯಕರಿಗೆ ಜಂಬ ಬಂದಿದೆ. ಸರ್ಕಾರಕ್ಕೆ ಗೌರವ ಘನತೆ ಇರಬೇಕು. ರೈತರ ವಿರುದ್ಧ ನಡೆದುಕೊಂಡ ಸರ್ಕಾರ ಯಾವತ್ತೂ ಉಳಿಯುವುದಿಲ್ಲ ಎಂದು ಕಾಂಗ್ರೆಸ್​ ಸರ್ಕಾರದ ವಿರುದ್ದ ಮಾಜಿ ಶಾಸಕ ಡಾ.ಕೆ. ಅನ್ನದಾನಿ ವಾಗ್ದಾಳಿ ನಡೆಸಿದ್ದಾರೆ.

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಹೋರಾಟ ನಿರಂತರವಾಗಿ ನಡೆಯುತ್ತಿದೆ, ಆದರೆ ಫಲ ಮಾತ್ರ ಶೂನ್ಯ. ರೈತರು  ತಮಿಳುನಾಡಿಗೆ ನೀರು ಬಿಡದಿರಲು ಹೋರಾಟ ಮಾಡುತ್ತಿದ್ದಾರೆ. ಸರ್ಕಾರಕ್ಕೆ ಇದರ ಬಗ್ಗೆ ಪರಿಜ್ಞಾನವೇ ಇಲ್ಲ ಎಂದು ಕಿಡಿಕಾರಿದ್ದಾರೆ.

ಅಧಿಕಾರಕ್ಕೆ ಬರುವ ಮುನ್ನ ಏನು ಭರವಸೆ ಕೊಟ್ರಿ? ಅನ್ನದಾತರ ಪರ ಇರ್ತೇನೆ ಅಂತ ಹೇಳಿ, ಈಗ ನೀವೇ ಅರ್ಜಿ ಹಾಕಿ ಅಂತಿರಾ? ಕಾವೇರಿಗಾಗಿ ತ್ಯಾಗ ಮಾಡಿ ಏನು ಆಗಲ್ಲ. ತಮಿಳುನಾಡಿನವರು 3ನೇ ಬೆಳೆಗೆ ನೀರು ಕೊಳ್ತಿದ್ದಾರೆ ಕೊಡ್ತಿದ್ದಿರಿ. ಪ್ರತಿ ಜಿಲ್ಲೆಯಲ್ಲಿ ರೈತರು ನಿಮಗೆ ಶಾಪ ಹಾಕ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ನಿಮ್ಮ ಕುರ್ಚಿ, ಸರ್ಕಾರ ನಡುಗುತ್ತೆ

ಚಳವಳಿಗಾರರನ್ನು ಹತ್ತಿಕ್ಕುವ ಕೆಲಸ ಮಾಡ್ತಿದ್ದಾರೆ. ಮಂಡ್ಯ ಜಿಲ್ಲೆಯ ಹಿಂದಿನ ಹೋರಾಟ ನೋಡಿ ಸಿದ್ದರಾಮಯ್ಯ ಅವರೇ. ರೈತರನ್ನ ಕೆಣಕುವ ಕೆಲಸ ಮಾಡಬೇಡಿ. ಮಂಡ್ಯ ಜನ ಸಿಡಿದ್ದೇದ್ದು ನಿಂತರೆ ನಿಮ್ಮ ಕುರ್ಚಿ, ನಿಮ್ಮ ಸರ್ಕಾರ ನಡುಗುತ್ತೆ. ರೈತರ ಹೋರಾಟ ಕೇಳಿಸ್ತಿಲ್ವಾ? ನೀರು ಬಿಡ್ತಿದ್ದಿರಲ್ಲ. ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟ ಆಗುತ್ತದೆ. ಸರ್ಕಾರ ಕಳೆದು ಕೊಳ್ತಿರಿ ಎಚ್ಚರಿಕೆ ಎಂದು ಗುಡುಗಿದ್ದಾರೆ.

ಸರ್ಕಾರಕ್ಕೆ ಕಿವಿ, ಕಣ್ಣು ಕಾಣ್ತಿಲ್ವ?

ನಿಮ್ಮ ಸರ್ಕಾರಕ್ಕೆ ಕಿವಿ, ಕಣ್ಣು ಕಾಣ್ತಿಲ್ವ? ಸುಮ್ಮನೆ ಕುಳಿತು ಹೋರಾಟ ಮಾಡ್ತಿದ್ದಾರೆ ಅಂತ ತಾಳ್ಮೆ ಪರೀಕ್ಷೆ ಮಾಡಬೇಡಿ. ಮಂಡ್ಯ ಜಿಲ್ಲೆಯ ಜನರ ಬಳಿ ಗೆಲ್ಲಿಸಲು ಮನವಿ ಮಾಡಿದ್ರಿ. ಮಂಡ್ಯ ಜನರು ತಿರಸ್ಕರಿಸದೆ ನಿಮ್ಮನ್ನ ಗೆಲ್ಲಿಸಿದ್ರು. ಡಿ.ಕೆ ಶಿವಕುಮಾರ್ ನೀರಾವರಿ ಮಂತ್ರಿಯಾಗಿ ಜಿಲ್ಲೆಯ ಜನರ ಕಷ್ಟ ಯಾಕೆ ಕೆಳ್ತಿಲ್ಲ? ಮಂಡ್ಯ ಜಿಲ್ಲೆಯ ಜನರು ಮುಂದೆ ತಕ್ಕ ಪಾಠ ಕಲಿಸುತ್ತಾರೆ ಎಂದು ಡಿಕೆಶಿ ವಿರುದ್ಧವೂ ಕಿಡಿಕಾರಿದ್ದಾರೆ.

RELATED ARTICLES

Related Articles

TRENDING ARTICLES