ಬೆಳಗಾವಿ : ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಕೋಮುಗಲಭೆ ಹೆಚ್ಚು ಎಂಬ ವಿಪಕ್ಷಗಳ ಆರೋಪ ವಿಚಾರ ಸಂಬಂಧ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಎಲ್ಲಿ ಕೋಮು ಗಲಭೆ ಆಗಿದೆ? ಎಂದು ಪ್ರಶ್ನಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅವರಿಗೆ ಆರೋಪ ಮಾಡೋದು ಬಿಟ್ಟು ಬೇರೆ ಏನು ಕೆಲಸ ಇದೆ. ಆರೋಪ ಮಾಡೋದೆ ಅವರ ಕೆಲಸ. ಅವರ ಆರೋಪ ಸತ್ಯ ಅಲ್ಲ, ಎಲ್ಲಾ ಸುಳ್ಳು ಆರೋಪಗಳು ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಶಿವಮೊಗ್ಗದಲ್ಲಿ ಯಾರೋ ದುಷ್ಕರ್ಮಿಗಳು ಕಲ್ಲೆಸೆದಿದ್ದಾರೆ. ಅವರನ್ನು ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ನಮ್ಮ ಸರ್ಕಾರದಲ್ಲಿ ಕೋಮುಗಲಭೆಯನ್ನು ತಕ್ಷಣ ಹತ್ತಿಕ್ಕುವ ಕೆಲಸ ಮಾಡ್ತೀವಿ. ಯಾರೇ ಕೋಮುಗಲಭೆ ಮಾಡಿದ್ರೆ ಅವರ ವಿರುದ್ಧ ಕಠಿಣ ಕ್ರಮ ತಗೆದುಕೊಳ್ಳಲಾಗುತ್ತದೆ. ಬಿಜೆಪಿಯವರು ಪ್ರತಿಭಟನೆ ಮಾಡಲಿ, ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಗೆ ಅಡ್ಡಿ ಮಾಡಲ್ಲ. ಯಾವುದೇ ಪ್ರತಿಭಟನೆ ಸದ್ಭಾವನೆ ಆಗಿರಬೇಕು, ಶಾಂತಿಯುತ ಆಗಿರಬೇಕು ಎಂದು ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಸಿದ್ದರಾಮಯ್ಯ ಶಕ್ತಿ ಪ್ರದರ್ಶನ
ಬೆಳಗಾವಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಶಕ್ತಿ ಪ್ರದರ್ಶನ ಮಾಡಿದರು. ರಾಷ್ಟ್ರೀಯ ಮಟ್ಟದ ಕುರುಬ ಸಮಾವೇಶ ಆಯೋಜನೆ ಮೂಲಕ ಸಿದ್ದರಾಮಯ್ಯನವರನ್ನು ವೈಭವೀಕರಿಸಲು ಬೆಂಬಲಿಗರು ಪ್ಲ್ಯಾನ್ ಮಾಡಿದ್ದರು. ಸಿದ್ದರಾಮೋತ್ಸವ ರೀತಿಯಲ್ಲೇ ಸಮಾವೇಶ ನಡೆದಿದೆ. ಸಿಎಂ ಸಿದ್ದರಾಮಯ್ಯರನ್ನು ಬೆಂಬಲಿಗರು ವಿಶೇಷವಾಗಿ ಸನ್ಮಾನಿಸಿದರು. ಸುಮಾರು ಎರಡು ಲಕ್ಷ ಜನ ಸೇರಿ ಅದ್ದೂರಿ ಸಮಾವೇಶಕ್ಕೆ ಸಾಕ್ಷಿಯಾದರು. ವಿವಿಧ ರಾಜ್ಯಗಳ ನೂರಾರು ಮುಖಂಡರು, ಬೆಂಬಲಿಗರು ಭಾಗಿಯಾಗಿದ್ದರು.