Sunday, December 22, 2024

ಮೈಸೂರು, ಚನ್ನಪಟ್ಟಣ, ಹಾಸನದಿಂದಲೂ ಫೋನ್ ಮಾಡಿದ್ರು : ಜಮೀರ್ ಹೊಸ ಬಾಂಬ್

ಹಾಸನ : ಬೇರೆ ಪಕ್ಷದಿಂದ ಬರುವವರು ಬಹಳ ಜನ ಇದ್ದಾರೆ. ಬಹಳ ಜನ ಮಾತನಾಡುತ್ತಿದ್ದಾರೆ. ಕನಿಷ್ಟ 60 ರಿಂದ 70 ಜನ ನನ್ನ ಜೊತೆಯೇ ಮಾತನಾಡಿದ್ದಾರೆ ಎಂದು ವಸತಿ ಸಚಿವ ಬಿ.ಝಡ್. ಜಮೀರ್ ಅಹಮ್ಮದ್ ಖಾನ್ ಹೊಸ ಬಾಂಬ್ ಸಿಡಿಸಿದ್ದಾರೆ.

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು, ಚನ್ನಪಟ್ಟಣ, ಕೋಲಾರ, ಚಿಕ್ಕಬಳ್ಳಾಪುರ, ಹಾಸನದಿಂದಲೂ ಫೋನ್ ಮಾಡಿದ್ದರು. ಬಹಳ ಜನ ಸೇರುವವರಿದ್ದಾರೆ, ಒಂದು ದೊಡ್ಡ ಮಟ್ಟದಲ್ಲಿ ಪ್ಯಾಲೇಸ್ ಗ್ರೌಂಡ್​​ನಲ್ಲಿ ಕಾರ್ಯಕ್ರಮ ಮಾಡಿ ಅವರನ್ನು ಸೇರಿಸಿಕೊಳ್ಳುವ ಕಾರ್ಯಕ್ರಮ ಮಾಡ್ತೇವೆ ಎಂದು ಆಪರೇಷನ್​ ಹಸ್ತದ ಬಗ್ಗೆ ಸುಳಿವು ನೀಡಿದ್ದಾರೆ.

ಇನ್ನೂ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರನ್ನು ಮರಳಿ ಕಾಂಗ್ರೆಸ್​ ಪಕ್ಷಕ್ಕೆ ಕರೆತರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಮ್ಮ‌ ಜೊತೆ ಮಾತುಕತೆ ಆಗಿಲ್ಲ. ಬೇರೆ ನಾಯಕರು ಮಾತನಾಡಿರುವ ಬಗ್ಗೆ ನನಗೆ ಗೊತ್ತಿಲ್ಲ. ಅವರು ಬಂದ್ರೆ ಸ್ವಾಗತ, ಅವರು ನಮ್ಮ ನಾಯಕರು, ನಾವು ಯಾವತ್ತೂ ಇಲ್ಲ ಅಂದಿಲ್ಲ ಎಂದು ಇಬ್ರಾಹಿಂಗೆ ಆಹ್ವಾನ ನೀಡಿದ್ದಾರೆ.

ಶಾಮನೂರು ನಮ್ಮ ಹಿರಿಯ ನಾಯಕರು

ಕಾಂಗ್ರೆಸ್ ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳಿಗೆ ಪ್ರಾತಿನಿಧ್ಯವಿಲ್ಲ ಎಂಬ ಶಾಮನೂರು ಶಿವಶಂಕಪ್ಪನವರ ಹೇಳಿಕೆಗೆ ಪ್ರತಿಕ್ರಿಯಿಸಿ, ಶಾಮನೂರು ಶಿವಶಂಕರಪ್ಪ‌ ನಮ್ಮ ಹಿರಿಯ ನಾಯಕರು. ಅವರ ಬಗ್ಗೆ ನಮಗೆ ಬಹಳ ಗೌರವವಿದೆ. ಅವರು ಹೇಳಿದಾಗೆ ಏಳು ಜನ ಲಿಂಗಾಯತ ಮಂತ್ರಿಗಳನ್ನ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಮುಸ್ಲಿಮರಿಗೆ ಕೊಡಿ ಅನ್ನೋಕೆ ಆಗುತ್ತಾ?

ಈಗ ಮುಸಲ್ಮಾನ್ ಸಮಾಜಕ್ಕೆ ಇಂತಹ ಕಡೆ ಕೊಡಬೇಕು ಅಂತ ನಾನು ಹೇಳೋದಕ್ಕೆ ಆಗುತ್ತಾ? ಮೆರಿಟ್ ಮೇಲೆ ನೋಡ್ತಾರೆ, ಯಾರು ಅಧಿಕಾರಿ ಕೆಲಸ ಮಾಡ್ತಾರೋ ಅವರನ್ನು ತಾನೆ ಹಾಕಬೇಕು. ಸರ್ಕಾರದೊಳಗೆ ಕೆಲಸ ಮಾಡಬೇಕಾದ್ರೆ ಅದರೊಳಗೆ ಜಾತಿ ಬರಬಾರದು ಅನ್ನೋದು ನನ್ನ ಭಾವನೆ.  ಯಾರು ಒಳ್ಳೆಯ ಕೆಲಸ ಮಾಡ್ತಾರೋ ಅವರನ್ನು ಹಾಕಬೇಕು ಯಾರಾದ್ರೂ ಇರಲಿ ಎಂದು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES