Wednesday, January 22, 2025

ಅ.4ಕ್ಕೆ ವಿಶ್ವಕಪ್ ಉದ್ಘಾಟನಾ ಸಮಾರಂಭ : ಬಾಲಿವುಡ್ ಸ್ಟಾರ್ ಮೆರಗು

ಬೆಂಗಳೂರು : ಬಹುನಿರೀಕ್ಷಿತ ICC ವಿಶ್ವಕಪ್ 2023ಕ್ಕೆ ವೇದಿಕೆ ಸಜ್ಜಾಗಿದೆ. ಕಳೆದ ಆವೃತ್ತಿಯ ಫೈನಲ್‌ನಲ್ಲಿ ಮುಖಾಮುಖಿ ಆಗಿದ್ದ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳು ಆರಂಭಿಕ ಪಂದ್ಯದಲ್ಲಿ ಸೆಣೆಸಾಟ ನಡೆಸಲಿದೆ.

ಇದಕ್ಕೂ ಮುಂಚಿತವಾಗಿ, ಅಕ್ಟೋಬರ್ 4ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭವ್ಯವಾದ ಉದ್ಘಾಟನಾ ಸಮಾರಂಭ ಆಯೋಜಿಸಲಾಗಿದೆ. ಅಕ್ಟೋಬರ್ 4ರಂದು ಕ್ಯಾಪ್ಟನ್ಸ್ ಡೇ ಆಗಿರುತ್ತದೆ ಮತ್ತು ಅದಾದ ನಂತರ ಸಂಜೆ 7 ಗಂಟೆಗೆ ಗ್ರ್ಯಾಂಡ್ ಓಪನಿಂದ ಶೋ ನಡೆಯಲಿದೆ.

ವಿಶ್ವಕಪ್ ಉದ್ಘಾಟನಾ ಸಮಾರಂಭಕ್ಕೆ ಬಾಲಿವುಡ್​ನ ಸ್ಟಾರ್ ನಟ ರಣವೀರ್ ಸಿಂಗ್, ಖ್ಯಾತ ಗಾಯಕರಾದ ಶ್ರೇಯಾ ಘೋಷಾಲ್, ಅರಿಜಿತ್ ಸಿಂಗ್ ಮತ್ತು ಆಶಾ ಭೋಂಸ್ಲೆ ಸೇರಿದಂತೆ ಹಲವಾರು ಬಾಲಿವುಡ್ ತಾರೆಯರನ್ನು BCCI ಆಹ್ವಾನಿಸಿದೆ. ಇದಲ್ಲದೆ, ಭಾರತೀಯ ಪರಂಪರೆಯನ್ನು ಪ್ರದರ್ಶಿಸುವ ಜೊತೆಗೆ ಲೇಸರ್ ಶೋ ಮತ್ತು ಪಟಾಕಿಗಳು ಸದ್ದು ಇರಲಿದೆ. ಈ ಸಂದರ್ಭದಲ್ಲಿ ಎಲ್ಲಾ 10 ತಂಡಗಳ ನಾಯಕರು ಉಪಸ್ಥಿತರಿರುತ್ತಾರೆ. ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಉದ್ಘಾಟನಾ ಪಂದ್ಯಕ್ಕೆ ಟಿಕೆಟ್ ಖರೀದಿಸಿದವರು ಈ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಬಹುದು.

ಮೋದಿ ಕ್ರೀಡಾಂಗಣ ರೆಡಿ

ವಿಶ್ವಕಪ್​ಗೆ ಸಿದ್ದತೆಗಳು ಭರದಿಂದ ಸಾಗಿವೆ. ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣ ಫಳ ಫಳ ಹೊಳೆಯುತ್ತಿದ್ದು, ಸ್ಟೇಡಿಯಂನ ವಿಹಂಗಮ ನೋಟ ಕಣ್ಮನ ಸೆಳೆಯುತ್ತಿದೆ. ವಿಶ್ವಕಪ್ ಟ್ರೋಫಿಯನ್ನ ಇದೀಗ ಕ್ರೀಡಾಂಗಣದಲ್ಲೆ ಇಡಲಾಗಿದೆ. ಅಕ್ಟೋಬರ್ 14ರಂದು ಇದೇ ಮೈದಾನದಲ್ಲಿ ಭಾರತ ಹಾಗೂ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ.

10 ತಂಡಗಳ ನಾಯಕರು

  • ಭಾರತ: ರೋಹಿತ್ ಶರ್ಮಾ
  • ಪಾಕಿಸ್ತಾನ: ಬಾಬರ್ ಅಝಮ್
  • ಇಂಗ್ಲೆಂಡ್ : ಜೋಸ್ ಬಟ್ಲರ್
  • ಆಸ್ಟ್ರೇಲಿಯಾ: ಪ್ಯಾಟ್ ಕಮ್ಮಿನ್ಸ್
  • ನ್ಯೂಜಿಲೆಂಡ್: ಕೇನ್ ವಿಲಿಯಮ್ಸನ್
  • ಶ್ರೀಲಂಕಾ: ದಸುನ್ ಶನಕ
  • ಬಾಂಗ್ಲಾದೇಶ : ಶಕೀಬ್ ಅಲ್ ಹಸನ್
  • ನೆದರ್ಲೆಂಡ್ಸ್ : ಸ್ಕಾಟ್ ಎಡ್ವರ್ಡ್ಸ್
  • ದಕ್ಷಿಣ ಆಫ್ರಿಕಾ: ತೆಂಬಾ ಬವುಮಾ
  • ಅಫ್ಘಾನಿಸ್ತಾನ : ಹಶ್ಮತುಲ್ಲಾ ಶಾಹಿದಿ

RELATED ARTICLES

Related Articles

TRENDING ARTICLES