Friday, November 22, 2024

ಭಾದ್ರಪದ ಮಾಸದಲ್ಲಿ ಸಂಕಷ್ಟಹರ ಗಣಪತಿ ಪೂಜೆ ಹೇಗೆ? ಯಾವಾಗ ಮಾಡಬೇಕು?

ಬೆಂಗಳೂರು : ಭಾದ್ರಪದ ಮಾಸದಲ್ಲಿ ಸಂಕಷ್ಟಹರ ಚತುರ್ಥಿಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಈ ಭಾದ್ರಪದ ಮಾಸದಲ್ಲಿ ಗಣಪತಿಯನ್ನು ‘ವಿಘ್ನರಾಜ ಮಹಾಗಣಪತಿ’ ಎಂಬ ಹೆಸರಿನಿಂದ ಕರೆಯಲಾಗುತ್ತದೆ ಎಂದು ಸಿದ್ಧಲಿಂಗೇಶ್ವರ ಗದ್ದುಗೆ ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.

ಈ ಭಾದ್ರಪದ ಮಾಸದಲ್ಲಿ ಸಂಕಷ್ಟಹರ ಗಣಪತಿ ಪೂಜೆಯನ್ನು ಯಾಕೆ ಮಾಡಬೇಕು? ಯಾವಾಗ ಮಾಡಬೇಕು? ವಿಶೇಷತೆ ಏನು? ಈ ದಿನ ಏನನ್ನು ದಾನ ಮಾಡಬೇಕು ಎಂಬ ಕುರಿತು ಪವರ್​ ಟಿವಿಗೆ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಗಳು ಮಾಹಿತಿ ನೀಡಿದ್ದಾರೆ.

ಇಂದು (ಅಕ್ಟೋಬರ್ 2) ಸಂಜೆ 04:48 ರಿಂದ ರಾತ್ರಿ 07:50 ರವೆರೆಗೆ ಮಹಾಗಣಪತಿಯ ಪೂಜೆಯನ್ನು ಮಾಡಬಹುದು. ಈ ದಿನ ಭರಣಿ ನಕ್ಷತ್ರವವಿದ್ದು ಇದನ್ನು ನಮ್ಮ ಧರ್ಮಗ್ರಂಥಗಳಲ್ಲಿ ‘ಮಹಾಭರಣಿ’ ಎಂದು ಕರೆಯಲಾಗುತ್ತದೆ. ಈ ಭಾದ್ರಪದ ಮಾಸದಲ್ಲಿ ಕನ್ಯಾರಾಶಿಯಲ್ಲಿ ಸೂರ್ಯನಾರಾಯಣ ದೇವರು ಸಂಚರಿಸುತ್ತಿರುವಾಗ ತನ್ನ ಕಿರಣಗಳಿಂದ ಪಿತೃಗಳನ್ನು ಸಂತೃಪ್ತಿಪಡಿಸುತ್ತಾನೆ ಎಂದು ತಿಳಿಸಿದ್ದಾರೆ.

ದುಷ್ಟ ಕಂಟಕಗಳು, ಅನಾರೋಗ್ಯ ದೂರ

ಇಂತಹ ಪಿತೃದೇವತೆಗಳನ್ನು ಆರಾಧಿಸುವ ಸಮಯದಲ್ಲಿ ಬರುವ ಅತ್ಯಂತ ಶ್ರೇಷ್ಠವಾದ ಗಣೇಶನ ಪೂಜೆಯೇ ಶ್ರೀ ‘ವಿಘ್ನರಾಜ ಗಣಪತಿಯ ಸಂಕಷ್ಟಹರ ಚತುರ್ಥಿ’. ವಿಘ್ನರಾಜ ಗಣಪತಿಯ ಆರಾಧನೆಯಿಂದ ಸಕಲ ಪಿತೃದೇವತೆಗಳು ಸಂತೃಪ್ತಿಯಾಗುತ್ತಾರೆ. ಜಾತಕದಲ್ಲಿ ಯಾರಿಗೆ ಅಪಮೃತ್ಯು ಭಯಗಳು, ದುಷ್ಟ ಕಂಟಕಗಳು, ಅನಾರೋಗ್ಯ ಮಾನಸಿಕ ರೋಗಗಳಿಂದ ಬಳಲುತ್ತಿರುವವರು ಈ ಮಹಾಭರಣಿ ನಕ್ಷತ್ರದಂದು ವಿಘ್ನರಾಜ ಮಹಾಗಣಪತಿಯನ್ನು ಆರಾಧಿಸುವುದರಿಂದ ಸಕಲ ಇಷ್ಟಾರ್ಥಗಳು ನೆರವೇರುತ್ತದೆ ಎಂದು ಶ್ರೀಗಳು ಹೇಳಿದ್ದಾರೆ.

ಸಕಲ ಪಿತೃದೇವತೆಗಳು ಸಂತೃಪ್ತಿ

ಪೂಜೆಯಲ್ಲಿ ಯಾವ ಮಂತ್ರ ಜಪಿಸಬೇಕು?

RELATED ARTICLES

Related Articles

TRENDING ARTICLES