Monday, December 23, 2024

ಕಾಂಗ್ರೆಸ್​ ಬಂದ್ಮೇಲೆ ಪಾಕಿಸ್ತಾನ ಧ್ವಜ, ಪಾಕ್ ಪರ ಘೋಷಣೆ ಆಗ್ತಾ ಇದೆ : ನಳಿನ್ ಕುಮಾರ್ ಕಟೀಲ್

ಮಂಗಳೂರು : ರಾಜ್ಯದಲ್ಲಿ ಪಾಕಿಸ್ತಾನ ಧ್ವಜ, ಪಾಕ್ ಪರ ಘೋಷಣೆ ಆಗ್ತಾ ಇದೆ ಎಂದು ಕಾಂಗ್ರೆಸ್​ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಿಡಿಕಾರಿದ್ದಾರೆ.

ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟ ವಿಚಾರ ಸಂಬಂಧ ಮಂಗಳೂರಿನಲ್ಲಿ ಮಾತನಾಡಿದ ಅವರು, ಈ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಈ ರೀತಿ ಆಗಿದೆ ಎಂದು ಕುಟುಕಿದ್ದಾರೆ.

ಶಿವಮೊಗ್ಗ ಈದ್ ಮಿಲಾದ್ ಸಂಘರ್ಷವನ್ನು ಖಂಡಿಸುತ್ತೇನೆ. ಗಣೇಶ ಚತುರ್ಥಿ ಯಾವುದೇ ಗಲಾಟೆ ನಡೆಯದೇ ಶಾಂತಿಯುತವಾಗಿ ನಡೆದಿದೆ. ಆದರೆ, ಶಿವಮೊಗ್ಗ ಗಲಾಟೆ ಹಿಂದೆ‌ ಮತಾಂಧ ಶಕ್ತಿಗಳ ಕೈವಾಡ ಇದೆ. ರಾಜ್ಯದಲ್ಲಿ ಪಾಕಿಸ್ತಾನ ಧ್ವಜ, ಪಾಕ್ ಪರ ಘೋಷಣೆ ಆಗ್ತಾ ಇದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಮತಾಂಧ ಶಕ್ತಿಗಳಿಗೆ‌ ಮತ್ತೆ ಧೈರ್ಯ ಬಂದಿದೆ

ಶಿವಮೊಗ್ಗ ಜಿಲ್ಲೆಯಲ್ಲಿ ಭಯೋತ್ಪಾದಕ ಚಟುವಟಿಕೆಗಳು ಕಾಣ್ತಾ ಇವೆ. ಮಂಗಳೂರು ಕುಕ್ಕರ್ ಬಾಂಬ್​​ನಲ್ಲೂ ಶಿವಮೊಗ್ಗದ ನಂಟಿದೆ. ಸರ್ಕಾರ ‌ಕಠಿಣ ಕ್ರಮ ಕೈಗೊಳ್ಳದೇ ಶಾಂತಿ ಸುವ್ಯವಸ್ಥೆ ವಿಫಲವಾಗಿದೆ. ಈ ಘಟನೆಯ ಪೂರ್ಣ ತನಿಖೆ‌ ಆಗಲಿ. ಈ ಸರ್ಕಾರ ಸಣ್ಣ ಮಟ್ಟದ ರಾಜಕಾರಣ ಮಾಡ್ತಾ ಇದೆ. ತುಷ್ಟೀಕರಣ ನೀತಿ ಮೂಲಕ ಮತಾಂಧ ಶಕ್ತಿಗಳಿಗೆ‌ ಮತ್ತೆ ಧೈರ್ಯ ಬಂದಿದೆ. ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿಯಾಗಿದೆ ಎಂದು ಆರೋಪಿಸಿದ್ದಾರೆ.

RELATED ARTICLES

Related Articles

TRENDING ARTICLES