Wednesday, January 22, 2025

ಇಂದು ಗಾಂಧಿ ಜನ್ಮದಿನ : ಭಕ್ತರಿಗೆ ಸಿದ್ದಲಿಂಗ ಸ್ವಾಮೀಜಿ ಸಂದೇಶ

ಬೆಂಗಳೂರು : ಇಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 154ನೇ ಜನ್ಮದಿನಾಚರಣೆ. ಈ ಹಿನ್ನೆಲೆಯಲ್ಲಿ ಗಾಂಧೀಜಿಯವರ ಆದರ್ಶಗಳನ್ನು ಪರಿಪಾಲಿಸಿ ಎಂದು ಸಿದ್ಧಲಿಂಗೇಶ್ವರ ಗದ್ದುಗೆ ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.

ಈ ಕುರಿತು ಪವರ್​ ಟಿವಿಗೆ ಪ್ರತಿಕ್ರಿಯಿಸಿರುವ ಶ್ರೀಗಳು, ಅಕ್ಟೋಬರ್ 2 ನಮ್ಮೆಲ್ಲರ ಪರಮ ಪೂಜ್ಯ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಜನ್ಮದಿನ. ಈ ನಿಮಿತ್ತ ಸಮಸ್ತ ಶಿಷ್ಯರೆಲ್ಲರೂ ಗಾಂಧೀಜಿಯವರ ಆದರ್ರಶಗಳನ್ನು ಪಾಲಿಸಿ ಎಂದು ಆಶೀರ್ವಚನ ನೀಡಿದ್ದಾರೆ.

ಸತ್ಯ, ನ್ಯಾಯ, ಧರ್ಮ, ನೀತಿಗಳನ್ನು ಅಳವಡಿಸಿಕೊಳ್ಳೋಣ. ಸತ್ಯ, ನ್ಯಾಯ, ಧರ್ಮ. ತಾಯಿ ತಂದೆಯವರ ಸೇವೆಯನ್ನು ಮಾಡಿ. ಪರೋಪಕಾರಿಯಾಗಿ ಜೀವನದಲ್ಲಿ ಆದಷ್ಟು ಸತ್ಯದ ಹಾದಿಯಲ್ಲಿ ನಡೆಯಲು ಪ್ರಯತ್ನಿಸಿರಿ ಎಂದು ಹೇಳಿದ್ದಾರೆ.

ದಿನಕ್ಕೊಂದು ಗಿಡವನ್ನು ನೆಡಿ

ಭಕ್ತಾಧಿಗಳೇ, ಕಾಲಜ್ಞಾನದ ಪ್ರಕಾರ ಮುಂದಿನ ಪೀಳಿಗೆಯು ಅತ್ಯಂತ ಉಷ್ಣತೆಯನ್ನು ಅನುಭವಿಸಬೇಕಾಗಿದೆ. ಇದರ ಪರಿಹಾರಕ್ಕಾಗಿ ದಿನಕ್ಕೊಂದು ಗಿಡವನ್ನು ನೆಡಲು ಪ್ರಯತ್ನಿಸೋಣ, ಜಗತ್ತನ್ನು ಉಷ್ಣತೆಯಿಂದ ಕಾಪಡೋಣ. ಒಳ್ಳೆಯದನ್ನೇ ಯೋಚಿಸಿ, ಒಳ್ಳೆಯದನ್ನೇ ಮಾಡಿ, ನಿಮಗೂ ಒಳಿತೇ ಆಗುತ್ತದೆ ಎಂದು ಆಶೀರ್ವಚನ ನೀಡಿದ್ದಾರೆ.

RELATED ARTICLES

Related Articles

TRENDING ARTICLES