ಬೆಂಗಳೂರು : ಹೆಚ್.ಡಿ. ಕುಮಾರಸ್ವಾಮಿ ಒಂದೊಂದು ದಿನಕ್ಕೆ ಎಲ್ಲಿ ಬೇಕಾದರೂ ಸಂಬಂಧ ಬೆಳೆಸಿಕೊಳ್ಳಬಹುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಂಡ ನಾಯಕರಾಗಿ ಎಷ್ಟು ಸಲ ಪಕ್ಷ ವಿಸರ್ಜನೆ ಮಾಡ್ತೀವಿ ಅಂತೀರಾ? ಕುಮಾರಸ್ವಾಮಿ ಪದೇ ಪದೇ ಪಕ್ಷ ವಿಸರ್ಜನೆ ಮಾಡ್ತೀನಿ ಅಂದರೆ, ಸಿದ್ದಾಂತ ನಂಬಿಕೊಂಡ ಕಾರ್ಯಕರ್ತರು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ವಿಧಾನ ಪರಿಷತ್ ಸದಸ್ಯರಾಗಿದ್ದ ಸಿ.ಎಂ. ಇಬ್ರಾಹಿಂರನ್ನು ಕರೆದುಕೊಂಡು ಹೋದ್ರಿ. ಆಗ ನಾನೇ ಕೆಪಿಸಿಸಿ ಅಧ್ಯಕ್ಷನಾಗಿದ್ದೆ. ಆಗ ನಾನೂ ನಿಮ್ಮ ತರಹವೇ ಮಿಸ್ಟರ್ ಅಂತ ಹೇಳಬಹುದಿತ್ತಲ್ಲ. ಆದರೆ, ನಾನು ಇಂಗ್ಲೀಷ್ ನಲ್ಲಿ ಮಿಸ್ಟರ್ ಅಂತ ನಿಮಗೆ ಹೇಳಲ್ಲ. ನಾನು ಕರೆಯಬೇಕು ಅಂತಿಲ್ಲ, ಸಾಗರೋಪಾದಿಯಲ್ಲಿ ಕಾಂಗ್ರೆಸ್ ಸೇರ್ಪಡೆ ಆಗ್ತಾರೆ ನೋಡ್ತಿರಿ ಎಂದು ಡಿ.ಕೆ ಶಿವಕುಮಾರ್ ಹೊಸ ಬಾಂಬ್ ಸಿಡಿಸಿದ್ದಾರೆ.