Monday, December 23, 2024

ಶಿವಮೊಗ್ಗದಲ್ಲಿ ಇದೆಲ್ಲಾ ಏನ್ ಹೊಸದಾಗಿ ನಡೆಯುತ್ತಿದ್ಯಾ? : ಪರಮೇಶ್ವರ್ ಉಡಾಫೆ ಉತ್ತರ

ಬೆಂಗಳೂರು : ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಉಡಾಫೆ ಉತ್ತರವನ್ನು ನೀಡಿ ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಶಿವಮೊಗ್ಗದಲ್ಲಿ ಈದ್‌ ಮಿಲಾದ್‌ ಹಬ್ಬದ ವೇಳೆ ಕಲ್ಲು ತೂರಾಟ ನಡೆದಿದ್ದು, ಎರಡು ಧರ್ಮಗಳ ನಡುವೆ ಕೋಮು ಸಂಘರ್ಷ ನಡೆದಿದ್ದರೂ ಇದೆಲ್ಲ ಏನ್‌ ಹೊಸದಾಗಿ ನಡೆದಿದೆಯೇ? ಎಂದು ಹೇಳಿದ್ದಾರೆ.

ಶಿವಮೊಗ್ಗದ ಘಟನೆಯಲ್ಲಿ ಭಾಗಿಯಾದ ನಾಲ್ವರನ್ನು ಅರೆಸ್ಟ್ ಮಾಡಲಾಗಿದೆ. ಯಾರು ಬಂಧನರಾಗಿದ್ದಾರೆ ಎಂಬ ಬಗ್ಗೆ ಮಾಹಿತಿ ಗೊತ್ತಿದ್ದರೂ ನಿಮಗೆ ಹೇಳುವುದಿಲ್ಲ. ಹೆಸರುಗಳನ್ನು ಹೇಗೆ ಬಹಿರಂಗಪಡಿಸಬೇಕು ಅಂತ ನಿರೀಕ್ಷೆ ಮಾಡ್ತೀರಾ?ಅವರಿಗೆ ಕಾನೂನು ಪ್ರಕಾರ ಏನು ಕ್ರಮ ಆಗಬೇಕು ಆಗುತ್ತದೆ ಎಂದು ತಿಳಿಸಿದ್ದಾರೆ.

ಪ್ರೊಸೆಷನ್ ಹೋದಾಗ ಏನಾದರು ಆಗುತ್ತೆ

ಇದೆಲ್ಲ ಏನು ಹೊಸದಾಗಿ ಆಗ್ತಾ ಇರೋದಾ? ಶಿವಮೊಗ್ಗದಲ್ಲಿ ಈ ಘಟನೆ ಆಗಿದೆ, ಅದನ್ನು ನಿಯಂತ್ರಣ ಮಾಡುವುದಕ್ಕೆ ನಮ್ಮ ಪೊಲೀಸರು ಸಮರ್ಥರಿದ್ದಾರೆ. ನಮಗೆ ಗೊತ್ತಿತ್ತು ಅಲ್ಲಿ ಟೆನ್ಶನ್ ಇದೆ, ಪ್ರೊಸೆಷನ್ ಹೋದಾಗ ಏನಾದರು ಆಗುತ್ತೆ ಅಂತ. ಹಾಗಾಗಿ, ದೊಡ್ಡ ಪ್ರಮಾಣದ ಗಲಾಟೆ ಆಗಿಲ್ಲ, ಅದನ್ನು ಪೊಲೀಸರು ನಿಯಂತ್ರಿಸಿದ್ದಾರೆ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES