Wednesday, January 22, 2025

ನೇತ್ರದಾನ : ಸಾವಿನಲ್ಲೂ ಸಾರ್ಥಕತೆ ಮೆರೆದ ಪ್ರೇಮಾ

ಬೆಂಗಳೂರು : ನಟ ನಾಗಭೂಷಣ್ ಕಾರು ಅಪಘಾತದಲ್ಲಿ ಮೃತಪಟ್ಟಿದ್ದ ಮಹಿಳೆ ಪ್ರೇಮಾರ ಕುಟುಂಬದವರು ಮೃತಳ ಕಣ್ಣುಗಳನ್ನು ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಬೆಂಗಳೂರಿನ ಕೆಂಪೇಗೌಡ ವೈದ್ಯಕೀಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮುಗಿದಿದ್ದು, ಪ್ರೇಮಾ ಅವರ ಪಾರ್ಥಿವ ಶರೀರವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ.

ಮೃತದೇಹವನ್ನು ಪ್ರೇಮಾ ಅವರ ಮೈದುನ ಜಯರಾಮ್ ಅವರ ಗಾಯತ್ರಿ ನಗರದ ನಿವಾಸಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ. ಕುಟುಂಬಸ್ಥರ ಅಂತಿಮ ದರ್ಶನದ ಬಳಿಕ ಸಂಜೆ ಹರಿಶ್ಚಂದ್ರ ಘಾಟ್​ನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ ಎಂದು ತಿಳಿದುಬಂದಿದೆ.

ಈ ಸುದ್ದಿ ಓದಿದ್ದೀರಾ? : ಹಾಸ್ಯ ನಟನ ಕಾರು ಅಪಘಾತ : ಮಹಿಳೆ ಸಾವು, FIR ದಾಖಲು

ಅಮ್ಮನಿಗಾಗಿ ಮಕ್ಕಳಿಬ್ಬರ ಕಣ್ಣೀರು

ತಾಯಿಯನ್ನು ಕಳೆದುಕೊಂಡಿರುವ ಮಕ್ಕಳಿಬ್ಬರು ಅಮ್ಮನಿಗಾಗಿ ಕಣ್ಣೀರು ಇಡುತ್ತಿದ್ದಾರೆ. ಮಾತ್ರವಲ್ಲದೆ ಅಪಘಾತಕ್ಕೆ ಕಾರಣವಾಗಿರುವ ನಟ ನಾಗಭೂಷಣ್ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ನಾಗಭೂಷಣ್ ವಿರುದ್ದ ಐಪಿಸಿ 279(ನಿರ್ಲಕ್ಷತೆ, ರ್ಯಾಷ್ ಡ್ರೈವಿಂಗ್, ಪುಟ್ ಬಾತ್ ಮೇಲೆ ವಾಹನ ಚಲಾವಣೆ), 337(ಜೀವಕ್ಕೆ ಹಾನಿ ಮಾಡೋದು) ಹಾಗೂ 304A (ಅಪಘಾತ ಪ್ರಕರಣ) ಅಡಿಯಲ್ಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES