Wednesday, December 25, 2024

2024ಕ್ಕೆ ಮೋದಿಯನ್ನ ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸೋಣ : ಶೋಭಾ ಕರಂದ್ಲಾಜೆ

ಚಿಕ್ಕಮಗಳೂರು : ಪ್ರಧಾನಿ ನರೇಂದ್ರ ಮೋದಿಯವರು ಪ್ರಪಂಚದಲ್ಲಿ ಭಾರತವನ್ನು ಅಗ್ರಸ್ಥಾನದಲ್ಲಿ ನಿಲ್ಲುಸುವ ಕೆಲಸ ಮಾಡುತ್ತಿದ್ದಾರೆ. ಮೋದಿ ಜೊತೆ ಕೈ ಜೋಡಿಸಿ, 2024ಕ್ಕೆ ಅತ್ಯಧಿಕ ಮತಗಳ ಅಂತರದಲ್ಲಿ ಮೋದಿ ಗೆಲ್ಲಿಸೋಣ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳದರು.

ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರು, ಸಂಸದರು ಅಧಿಕಾರ ಇರಬಹುದು, ಇಲ್ಲದಿರಬಹುದು. ಆದರೆ, ದೇಶ ಉಳಿಯೋದು ಮುಖ್ಯ. ಹಾಗಾಗಿ, ಎಲ್ಲರಿಗೂ ಪ್ರಾರ್ಥನೆ ಮಾಡುತ್ತೇನೆ ಮೋದಿ ಹಾಗೂ ದೇಶಕ್ಕಾಗಿ ಕೆಲಸ ಮಾಡಿ ಎಂದು ತಿಳಿಸಿದರು.

ಆರು ತಿಂಗಳಿನಲ್ಲಿ ಸರ್ಕಾರ ಬಿದ್ದು ಹೋಗುತ್ತದೆ ಎಂಬ ಮಾಜಿ ಸಿಎಂ ಹೆಚ್​​.ಡಿ. ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಅವರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲ್ಲ. ನಾಲ್ಕು ತಿಂಗಳು ಮುಗಿಸಿ 5ನೇ ತಿಂಗಳಿಗೆ ಈ ಸರ್ಕಾರ ಬಂದಿದೆ. ಆದರೆ ಐದು ತಿಂಗಳಲ್ಲಿ ಸರ್ಕಾರ ಎಡವಟ್ಟು ಮಾಡಿಕೊಂಡಿದೆ. ಈ ಸರ್ಕಾರ ಭ್ರಷ್ಟಾಚಾರದ ಕೂಪವಾಗಿದೆ, ಸ್ವಜನ ಪಕ್ಷಪಾತದ ಉತ್ತುಂಗಕ್ಕೆ ಏರಿದೆ ಎಂದು ಆರೋಪಿಸಿದರು.

ಆಮಿಷ ಒಡ್ಡಿ ಸೆಳೆಯುತ್ತಿದ್ದಾರೆ

ಬಿಜೆಪಿ ಮಾಜಿ ಶಾಸಕರು ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಮಾತನಾಡಿ, ನಮ್ಮ ಮುಖಂಡರು, ಮಾಜಿ ಶಾಸಕರನ್ನ ಆಮಿಷ ಒಡ್ಡಿ ಸೆಳೆಯುತ್ತಿದ್ದಾರೆ. ಆಂತರಿಕವಾಗಿ ಕಾಂಗ್ರೆಸ್ ಸೇಫ್ ಇಲ್ಲ, ಆಂತರಿಕವಾಗಿ ಕಾಂಗ್ರೆಸ್ ಗಲಿಬಿಲಿಯಲ್ಲಿದ್ದಾರೆ. ಅವರಿಗೆ ಅಸುರಕ್ಷತೆ ಕಾಡ್ತಿದೆ, ಅದಕ್ಕೆ ಬಿಜೆಪಿಯಿಂದ ಕರೆದುಕೊಳ್ತಿದ್ದಾರೆ ಎಂದು ಕುಟುಕಿದರು.

RELATED ARTICLES

Related Articles

TRENDING ARTICLES