ಬೆಂಗಳೂರು : ಆರು ತಿಂಗಳೊಳಗಾಗಿ ಕಾಂಗ್ರೆಸ್ ಸರ್ಕಾರ ಬೀಳುತ್ತದೆ ಎಂಬ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕುಮಾರಸ್ವಾಮಿ ಮಾಜಿ ಆಗಿಬಿಟ್ಟಿದ್ದಾರೆ. ಸಮ್ಮಿಶ್ರ ಸರ್ಕಾರ ಬರುತ್ತೆ, ನಾನೇ ಸಿಎಂ ಆಗ್ತೀನಿ ಅಂತ ಭ್ರಮೆಯಲ್ಲಿದ್ರು. ಈಗ ಭ್ರಮನಿರಸನರಾಗಿಬಿಟ್ಟಿದ್ದಾರೆ, ಮಾಜಿ ಸಿಎಂ ಆಗಿಬಿಟ್ಟಿದ್ದಾರೆ ಎಂದು ತಿರುಗೇಟು ಕೊಟ್ಟಿದ್ದಾರೆ.
ಲಿಂಗಾಯತ ನಾಯಕರು, ಅಧಿಕಾರಿಗಳ ಕಡೆಗಣನೆ ವಿಚಾರದ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ ಅವರು, ನೋಡಪ್ಪಾ.. ನಮ್ಮದು ಜಾತ್ಯಾತೀತ ಸರ್ಕಾರ. ಯಾರಿಗೂ ಅನ್ಯಾಯ ಆಗಿಲ್ಲ. ಶಕ್ತಿ ಯೋಜನೆಯನ್ನು ಯಾವುದೋ ಒಂದು ಜಾತಿಗೆ ಮಾಡಿದ್ದೀವಾ? ಅನ್ನಭಾಗ್ಯ, ಗೃಹಜ್ಯೋತಿ ಯಾವುದಾದಾರೂ ಜಾತಿಗೆ ಮಾಡಿದ್ದೀವಾ? ಗ್ಯಾರಂಟಿಗಳನ್ನು ಯಾವುದೋ ಧರ್ಮಕ್ಕೆ ಮಾಡಿದ್ದೀವಾ? ನಾವು ಜಾತೀನೇ ನೋಡಿಲ್ಲ, ಎಲ್ಲರಿಗೂ ಸಮಾನವಾಗಿ ಮಾಡಿದ್ದೀವಿ ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? : ಲಿಂಗಾಯತ ಶಾಸಕರಿಗೆ ಅಷ್ಟು ಧಮ್ ಇಲ್ಲ : ಶಾಸಕ ಯತ್ನಾಳ್
ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಬಗ್ಗೆ ಸಿ.ಎಂ ಇಬ್ರಾಹಿಂ ಬೇಸರಗೊಂಡಿರುವ ಬಗ್ಗೆ ಮಾತನಾಡಿದದ ಅವರು, ಈ ವಿಚಾರದ ಬಗ್ಗೆ ನೀವು ಇಬ್ರಾಹಿಂ ಅವರನ್ನೇ ಕೇಳಿ ಎಂದು ಪ್ರತಿಕ್ರಿಯೆಗೆ ನಿರಾಕರಿಸಿದ್ದಾರೆ.