Monday, November 18, 2024

ಏಷ್ಯನ್ ಗೇಮ್ಸ್ : ಭಾರತಕ್ಕೆ ಮತ್ತೆ ಎರಡು ಚಿನ್ನದ ಪದಕ

ಬೆಂಗಳೂರು : ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಅಥ್ಲೀಟ್ ಅವಿನಾಶ್ ಸಬ್ಲೆ ಚಿನ್ನದ ಪದಕ ಗೆದ್ದಿದ್ದಾರೆ.

ಪುರುಷರ 3,000 ಮೀಟರ್ ಸ್ಟೀಪಲ್‌ ಚೇಸ್‌ ಓಟದಲ್ಲಿ ಅವನಾಶ್ ಸಬ್ಲೆ ಸ್ವರ್ಣ ಗೆದ್ದು ಭಾರತದ ಪರ ಹೊಸ ದಾಖಲೆ ಬರೆದಿದ್ದಾರೆ. ಇದರೊಂದಿಗೆ ಅಥ್ಲೆಟಿಕ್ಸ್​ನಲ್ಲಿ ಭಾರತ ತಂಡವು ಎರಡು ಚಿನ್ನದ ಪದಕದ ಖಾತೆ ತೆರೆದಿದೆ.

ಸ್ಟೀಪಲ್‌ ಚೇಸ್‌ ಓಟದಲ್ಲಿ ಭಾರತ ಚಿನ್ನ ಗೆದ್ದಿರುವುದು ಇದೇ ಮೊದಲು. ಸ್ಟೀಪಲ್‌ಚೇಸ್‌ನಲ್ಲಿ ಕೇವಲ 8 ನಿಮಿಷ 11.20 ಸೆಕೆಂಡುಗಳಲ್ಲಿ ಗುರಿ ಮುಟ್ಟುವ ಮೂಲಕ ಅವಿನಾಶ್ ಸೆಬ್ಲೆ ದಾಖಲೆ ಬರೆದಿದ್ದಾರೆ. ಈ ಮೂಲಕ ಜಪಾನ್‌ನ ಮಿಯುರಾ ರ್ಯುಜಿ (8:09.91) ನಂತರ ಏಷ್ಯಾದ ಎರಡನೇ ವೇಗದ ಸ್ಟೀಪಲ್​ಚೇಸ್ ರೇಸರ್ ಎನಿಸಿಕೊಂಡಿದ್ದಾರೆ.

ಸಜೀಂದರ್ ಪಾಲ್​ ಸಿಂಗ್​ಗೆ ಚಿನ್ನ

2022ರ ಕಾಮನ್‌ವೆಲ್ತ್ ಗೇಮ್ಸ್​ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಅವಿನಾಶ್, ಈ ಬಾರಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಅಲ್ಲದೆ, 2018ರಲ್ಲಿ ಹೊಸೈನ್​ ಖೇನಿಯಾ ಅವರ 8:22:79ರ ದಾಳಕೆಯನ್ನು ಅವಿನಾಶ್ ಮುರಿದಿದ್ದಾರೆ. ಇನ್ನೂ ಪುರುಷರ ಶಾರ್ಟ್​ಪುಟ್​ನಲ್ಲಿ ಸಜೀಂದರ್ ಪಾಲ್​ ಸಿಂಗ್ ಚಿನ್ನದ ಪದಕ ಗೆದ್ದಿದ್ದಾರೆ.

RELATED ARTICLES

Related Articles

TRENDING ARTICLES