Sunday, January 12, 2025

ಪ್ರಧಾನಿ ಮೋದಿಗೆ ರಕ್ತದಲ್ಲಿ ಪತ್ರ ಬರೆದ ನಟ ಪ್ರೇಮ್

ಬೆಂಗಳೂರು : ಸ್ಯಾಂಡಲ್​ವುಡ್​ ಲವ್ಲಿ ಸ್ಟಾರ್ ಪ್ರೇಮ್ ಅವರು ತಮ್ಮ ರಕ್ತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುವ ಮೂಲಕ ಕಾವೇರಿ ಜಲವಿವಾದದಲ್ಲಿ ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದಾರೆ.

ಕಾವೇರಿ ನದಿ ನೀರಿಗಾಗಿ ಇತ್ತೇಚೆಗೆ ನಡೆದ ಕರ್ನಾಟಕ ಬಂದ್​ನಲ್ಲಿ ಭಾಗಿಯಾಗಿದ್ದ ನಟ ನೆನಪಿರಲಿ ಪ್ರೇಮ್ ಅವರು ಇದೀಗ ಪತ್ರ ಚಳವಳಿಯಲ್ಲಿ ಭಾಗಿಯಾಗಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆ ಕರೆಕೊಟ್ಟಿದ್ದ ರಕ್ತದಲ್ಲಿ ಪ್ರಧಾನಿಗೆ ಪತ್ರ ಬರೆಯಿರಿ ಚಳವಳಿಯಲ್ಲಿ ಭಾಗಿಯಾಗಿ ರಕ್ತದಲ್ಲಿ ಪ್ರಧಾನಿಗೆ ಪತ್ರ ಬರೆದಿದ್ದಾರೆ.

ರೈತರಿಗೆ ನ್ಯಾಯ ದೊರಕಿಸಿ

ಪ್ರಧಾನಿ ನರೇಂದ್ರ ಮೋದಿ ಅವರೇ, ಕಾವೇರಿ ವಿಷಯದಲ್ಲಿ ಮಧ್ಯಸ್ತಿಕೆ ವಹಿಸಿ ನಮ್ಮ ನೆಲದ ರೈತರಿಗೆ ಹಾಗೂ ಕರ್ನಾಟಕಕ್ಕೆ ನ್ಯಾಯ ದೊರಕಿಸಿ. ಕಾವೇರಿ ನಮ್ಮದು. ನೆನಪಿರಲಿ ಪ್ರೇಮ್ ಎಂದು ಪತ್ರದಲ್ಲಿ ಪ್ರೇಮ್ ಉಲ್ಲೇಖಿಸಿದ್ದಾರೆ.

ಇನ್ಸ್ಟಾದಲ್ಲಿ ವಿಡಿಯೋ ಪೋಸ್ಟ್​

ಪತ್ರ ಬರೆಯುತ್ತಿರುವ ವಿಡಿಯೋವನ್ನು ಅವರು ಇನ್ಸ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ನೆಟ್ಟಿಗರು ನೆಗೆಟಿವ್ ಮತ್ತು ಪಾಸಿಟಿವ್ ಎರಡೂ ಕಾಮೆಂಟ್ಸ್ ಮಾಡಿದ್ದಾರೆ. ಕನ್ನಡ ನೆಲ, ಜಲ ವಿಷಯದಲ್ಲಿ ಹೋರಾಡಲು ನಟ ಪ್ರೇಮ್ ಸದಾ ಮುಂದೆ ಬರುತ್ತಾರೆ. ಅನೇಕ ಹೋರಾಟಗಳಲ್ಲೂ ಅವರು ಭಾಗಿಯಾಗಿದ್ದಾರೆ.

RELATED ARTICLES

Related Articles

TRENDING ARTICLES