Wednesday, January 22, 2025

ಸೈಕೋಪಾತ್‌ ಬಂಧನ : ಒಂಟಿ ಹೆಣ್ಮಕ್ಳೇ ಕಾಮುಕನ ಟಾರ್ಗೆಟ್

ಬೆಂಗಳೂರು : ಒಂಟಿ‌ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದ ಸೈಕೋ ಕಾಮುಕನನ್ನು ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಗ್ಯಾರೇಜ್​​ನಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಅಯ್ಯಪ್ಪ ರಿಪೇರಿ ‌ಬಿಡುತ್ತಿದ್ದ ಬೈಕ್ ತೆಗೆದುಕೊಂಡು ಸುತ್ತಾಡುತ್ತಿದ್ದ. ಹೈಪೈ ಏರಿಯಾ ರೌಂಡ್ಸ್ ಹೊಡೆದು ‌ಒಂಟಿ‌ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದ.

ಬೆಳಗಿನ ಜಾವ ‌ಹಾಗೂ ಸಂಜೆ 8 ರಿಂದ 9 ಸಮಯದಲ್ಲಿ ವಸಂತನಗರ, ಸದಾಶಿವನಗರದಲ್ಲಿ‌ ರೌಂಡ್ಸ್ ಹಾಕುತ್ತಿದ್ದ. ಈ ವೇಳೆ ಒಂಟಿಯಾಗಿ ನಡೆದುಕೊಂಡು ಹೋಗುವ ಮಹಿಳೆಯರಿಗೆ ಲೈಂಗಿಕ ‌ಕಿರುಕುಳ ಕೊಡುತ್ತಿದ್ದ. ಈ ವೇಳೆ ಮಹಿಳೆ ಕಿರುಚಾಡುತ್ತಿದ್ದಂತೆ ಎಸ್ಕೇಪ್ ಆಗುತ್ತಿದ್ದ.

ಈ ಸುದ್ದಿ ಓದಿದ್ದೀರಾ? : ರಸ್ತೆ ದಾಟುತ್ತಿದ್ದ ಯುವಕನ ಉಸಿರು ಕಸಿದ ಕಿಲ್ಲರ್ KSRTC

ಪ್ರತಿ ದಿನ ಬೇರ ಬೇರೆ ಬೈಕ್​ನಲ್ಲಿ ಹೋಗಿ ಕೃತ್ಯವೆಸಗುತ್ತಿದ್ದ. ಆರೋಪಿ ಅಯ್ಯಪ್ಪ ವಸಂತನಗರದಲ್ಲಿ‌ ಮಹಿಳೆಯ ಮೇಲೆ ದೌರ್ಜನ್ಯವೆಸಗಿ ಎಸ್ಕೇಪ್ ಅಗಿದ್ದ. ಮಹಿಳೆ ಈ ಕುರಿತು ಹೈಗ್ರೌಂಡ್​​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಸದ್ಯ ಆರೋಪಿ ಆಯ್ಯಪ್ಪನನ್ನು ಹೈಗ್ರೌಂಡ್ ಪೊಲೀಸರು ಬಂಧಿಸಿದ್ದು, ತನಿಖೆ ಕೈಗೊಂಡಿದ್ದಾರೆ.

RELATED ARTICLES

Related Articles

TRENDING ARTICLES