Wednesday, January 22, 2025

2ನೇ ಮಗುವಿನ ನಿರೀಕ್ಷೆಯಲ್ಲಿ ವಿರಾಟ್​ ಕೋಹ್ಲಿ ಮತ್ತು ಅನುಷ್ಕಾ!?

ಮುಂಬೈ : ಟೀಂ ಇಂಡಿಯಾದ ಮಾಜಿ ನಾಯಕ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ದಂಪತಿಗಳು ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.

ಸದ್ಯ ಅನುಷ್ಕಾ ಶರ್ಮಾ ಗರ್ಭೀಣಿಯಾಗಿದ್ದು, ಹೀಗಾಗಿಯೇ ಅವರು ಕೆಲವು ದಿನಗಳಿಂದ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲ. ಜೊತೆಗೆ ವಿರಾಟ್ ಕೊಹ್ಲಿ ಅವರೊಂದಿಗೆ ಎಲ್ಲಿಗೂ ಪ್ರಯಾಣಿಸುತ್ತಿಲ್ಲ ಹಾಗೂ ಪಂದ್ಯಗಳನ್ನು ವೀಕ್ಷಿಸಲು ಕ್ರೀಡಾಂಗಣಕ್ಕೆ ಬರುತ್ತಿಲ್ಲ ಎಂದು ವರದಿಯಾಗಿದೆ.

ಇದನ್ನೂ ಓದಿ : ಕಾವೇರಿಗೆ ಪೂಜೆ ಸಲ್ಲಿಸಿದ ನಟ ಅಭಿಷೇಕ್​ ಮತ್ತು ಅವಿವಾ!

ಮೂಲಗಳ ಪ್ರಕಾರ, ಅನುಷ್ಕಾ ತಮ್ಮ ಎರಡನೇ ಮಗುವಿನ ನಿರೀಕ್ಷಿಯಲ್ಲಿದ್ದಾರೆ. ಕಳೆದ ಬಾರಿಯಂತೆ, ಅವರು ಮುಂದಿನ ದಿನಗಳಲ್ಲಿ ಈ ಸಿಹಿ ವಿಚಾರವನ್ನು ಸಾರ್ವಜನಿಕವಾಗಿ ಹಂಚಿಕೊಳಲ್ಲಿದ್ದಾರೆ. ಹೀಗಾಗಿಯೇ ಅನುಷ್ಕಾ ಯಾವುದೇ ಕಾರ್ಯಕ್ರಮಕ್ಕೆ ಹಾಜರಾಗಿಲ್ಲ ಅಥವಾ ಮುಂಬೈನಲ್ಲಿ ಎಲ್ಲಿಯೂ ಕಾಣಿಸಿಕೊಂಡಿಲ್ಲ.

ಅಲ್ಲದೆ ಊಹಾಪೋಹಗಳನ್ನು ತಪ್ಪಿಸುವ ಸಲುವಾಗಿ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿಲ್ಲ ಎಂದು ವರದಿಯಾಗಿದೆ.

RELATED ARTICLES

Related Articles

TRENDING ARTICLES