Wednesday, January 22, 2025

MS ಧೋನಿ ಹೊಸ ‘ಪೋನಿ ಟೈಲ್ ಲುಕ್’ಗೆ ಫ್ಯಾನ್ಸ್ ಫಿದಾ

ಬೆಂಗಳೂರು : ಕ್ಯಾಪ್ಟನ್ ಕೂಲ್ ಎಂದೇ ಖ್ಯಾತರಾಗಿರುವ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಹೊಸ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ.

ಐಪಿಎಲ್​ನಲ್ಲಿ ಚೆನ್ನೈ ತಂಡವನ್ನು ಮುನ್ನಡೆಸುತ್ತಿರುವ ಧೋನಿ 42 ವರ್ಷಕ್ಕಿಂತ ಮೇಲ್ಪಟ್ಟವರು. ಆದರೆ, ಇಂದಿಗೂ ಅವರು ಯುವಕರಂತೆ ಎಲ್ಲರೊಂದಿಗೂ ಬೆರೆತು ಚಿಕ್ಕವರಂತೆ ಕಾಣಿಸಿಕೊಳ್ಳುತ್ತಾರೆ. ಅದೇ ರೀತಿ ಇದೀಗ ಅವರ ಹೊಸ ಲುಕ್​ ಸಖತ್​ ವೈರಲ್ ಆಗುತ್ತಿದೆ.

ಉದ್ದನೆಯ ಕೂದಲಿನೊಂದಿಗೆ ವಿಂಟೇಜ್​ ಲುಕ್​ನಲ್ಲಿ ಕಾಣಿಸಿಕೊಂಡ ತಲಾ ಧೋನಿ, ಇತ್ತೀಚೆಗೆ ಪೋನಿ ಟೈಲ್​(ಜುಟ್ಟು) ಹೇರ್​ ಸ್ಟೈಲ್​ನೊಂದಿಗೆ ಕ್ಯಾಮೆರಾಗಳ ಮುಂದೆ ಕಾಣಿಸಿಕೊಂಡರು. ಮಹಿ ಯಾವಾಗಲೂ ಟ್ರೆಂಟಡ್ ಕ್ರಿಯೇಟ್​ ಮಾಡುತ್ತಾರೆ. ಅವರ ಹೊಸ ಹೇರ್​ ಸ್ಟೈಲ್​ ಫಾಲೋ ಮಾಡಬೇಕು ಎಂದು ಕ್ರಿಕೆಟ್ ಅಭಿಮಾನಿಗಳು xನಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

RELATED ARTICLES

Related Articles

TRENDING ARTICLES