Monday, December 23, 2024

ಕಾವೇರಿ ಸಮಸ್ಯೆಗೆ ಮೇಕೆದಾಟು ಒಂದೇ ಪರಿಹಾರ : ಡಿ.ಕೆ. ಸುರೇಶ್

ರಾಮನಗರ : ಕಾವೇರಿ ನದಿ ನೀರು ವಿವಾದ ವಿಚಾರವಾಗಿ ರಾಜ್ಯದ ಜನತೆ ಹೋರಾಟ ಮಾಡುತ್ತಿರುವ ಬಗ್ಗೆ ಸಂಸದ ಡಿ.ಕೆ. ಸುರೇಶ್ ಪ್ರತಿಕ್ರಿಯೆ ನೀಡಿದ್ದಾರೆ.

ಚನ್ನಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಶಾಶ್ವತ ಪರಿಹಾರಕ್ಕಾಗಿ ಈ ಹಿಂದೆ ಮೇಕೆದಾಟು ಹೋರಾಟ ಮಾಡಿದ್ವಿ. ಈ ನೀರಿನ ಸಮಸ್ಯೆಗೆ ಮೇಕೆದಾಟು ಒಂದೇ ಪರಿಹಾರ. ಹಾಗಾಗಿ, ಮೇಕೆದಾಟು ಆಗಬೇಕೆಂಬುದು ನಮ್ಮ ಒತ್ತಾಯ ಎಂದು ಹೇಳಿದ್ದಾರೆ.

ಈಗ ಸಂಕಷ್ಟ ಬಂದಿದೆ, ಅದಕ್ಕೆ ಕಾರಣ ನ್ಯಾಯಾಧೀಕರಣದ ತೀರ್ಪು. ಇದು ಸುಪ್ರಿಂ ಕೋರ್ಟ್ ಮಾಡಿರುವ ನ್ಯಾಯಾಧೀಕರಣ, ಕಾಂಗ್ರೆಸ್​​ನವರು ಮಾಡಿರುವ ನ್ಯಾಯಾಧೀಕರಣ ಅಲ್ಲ. ಬಿಜೆಪಿ ನೇತೃತ್ವದ ಬೋರ್ಡ್ ತೀರ್ಮಾನ ನೀಡಿದೆ. ಸಂಪೂರ್ಣ ನೀರಾವರಿ ಜವಾಬ್ದಾರಿಯನ್ನ ಅವರಿಗೆ ನೀಡಲಾಗಿದೆ. ನಮ್ಮ ಸರ್ಕಾರದ ಪರವಾಗಿ ಅಧಿಕಾರಿಗಳು ವಾದ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES