Thursday, December 19, 2024

ಪಾಕಿಸ್ತಾನಕ್ಕೆ ಮಣ್ಣುಮುಕ್ಕಿಸಿ ಚಿನ್ನ ಗೆದ್ದ ಭಾರತ

ಬೆಂಗಳೂರು : ಏಷ್ಯನ್​ ಗೇಮ್ಸ್​ನಲ್ಲಿ ಭಾರತಕ್ಕೆ ಇಂದು ಬಂಗಾರದ ದಿನ. ಸ್ಕ್ವಾಷ್​ ಪುರುಷರ ಟೀಂ ಈವೆಂಟ್​ನಲ್ಲಿ ಭಾರತ ಚಿನ್ನದ ಪದಕ ಗೆದ್ದುಕೊಂಡಿದೆ.

ಚೀನಾದ ಹಾಂಗ್​ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್​ನ ಸ್ಕ್ವಾಷ್​ ಫೈನಲ್​ ಪಂದ್ಯದಲ್ಲಿ ಪಾಕಿಸ್ತಾನ್ ತಂಡಕ್ಕೆ ಮಣ್ಣುಮುಕ್ಕಿಸಿದ ಭಾರತ ಸ್ವರ್ಣಕ್ಕೆ ಕೊರಳೊಡ್ಡಿದೆ. ಇದರೊಂದಿಗೆ ಈ ಭಾರತ ಪದಕ ಪಟ್ಟಿಯಲ್ಲಿ 10ನೇ ಸ್ವರ್ಣ ಪದಕ ಸೇರ್ಪಡೆಯಾಗಿದೆ.

ಈ ಪಂದ್ಯದ ಆರಂಭದಲ್ಲಿ ಪಾಕಿಸ್ತಾನ್ ತಂಡ ಮೇಲುಗೈ ಸಾಧಿಸಿತ್ತು. ಆದರೆ, ಆ ಬಳಿಕ ಬೊಂಬಾಟ್ ಕಂಬ್ಯಾಕ್ ಮಾಡಿದ ಭಾರತೀಯರು ಕಠಿಣ ಪೈಪೋಟಿ ನೀಡಿ ಪಂದ್ಯವನ್ನು 2-1 ಅಂತರದಿಂದ ಗೆದ್ದುಕೊಂಡಿದ್ದು ವಿಶೇಷ. ಮೊದಲ ಸುತ್ತಿನಲ್ಲಿ ಭಾರತೀಯ ಸ್ಕ್ವಾಷ್ ತಾರೆ ಮಹೇಶ್ ಮಂಗಾಂವ್ಕರ್ ಪಾಕ್ ಆಟಗಾರ ನಾಸಿರ್ ಇಕ್ಬಾಲ್ ವಿರುದ್ಧ ಸೋತಿದ್ದರು. ಇದರ ನಂತರ ಸೌರವ್ ಘೋಷಾಲ್ ಅದ್ಭುತ ಪ್ರದರ್ಶನ ನೀಡುವ ಮೂಲಕ MA ಖಾನ್ ಅವರನ್ನು ಸೋಲಿಸಿದರು. ಈ ಮೂಲಕ ಸ್ಕೋರ್ ಅನ್ನು 1-1 ರಲ್ಲಿ ಸಮಗೊಳಿಸಿದರು.

RELATED ARTICLES

Related Articles

TRENDING ARTICLES