ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸೈಬರ್ ಕ್ರೈಂನ ಮಹಾ ಜಾಲ ಬಯಲಿಗೆ ಬಂದಿದೆ. ಖತರ್ನಾಕ್ ಗ್ಯಾಂಗ್ ಅನ್ನ ಸಿಸಿಬಿಯ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
84 ಬ್ಯಾಂಕ್ ಅಕೌಂಟ್ನಲ್ಲಿ 854 ಕೋಟಿ ರೂಪಾಯಿಗಳಷ್ಟು ವಹಿವಾಟು ನಡೆದಿರುವುದು ಪತ್ತೆಯಾಗಿದ್ದು, ದೇಶಾದ್ಯಂತ 5,013 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಬೆಂಗಳೂರು ನಗರದಲ್ಲಿ 17 ಪ್ರಕರಣಗಳು ದಾಖಲಾಗಿವೆ.
ಈ ಪ್ರಕರಣದಡಿ ಮನೋಜ್ ಅಲಿಯಾಸ್ ಜಾಕ್, ಫಣೀಂದ್ರ, ವಸಂತ್, ಶ್ರೀನಿವಾಸ, ಚಕ್ರಾದರ್ ಅಲಿಯಾಸ್ ಚಕ್ರಿ, ಸೋಮಶೇಖರ್ ಅಲಿಯಾಸ್ ಅಂಕಲ್ ಎಂಬುವವರನ್ನ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ 13 ಮೊಬೈಲ್, 7 ಲ್ಯಾಪ್‍ಟಾಪ್ , ಪ್ರಿಂಟರ್, ಸ್ವೈಪಿಂಗ್ ಮಿಷನ್, ಹಾರ್ಡ್‍ಡಿಸ್ಕ್, ಹಲವಾರು ಬ್ಯಾಂಕ್ ಪಾಸ್‍ಬುಕ್‍ಗಳು ಮತ್ತು ಇತರ ದಾಖಲಾತಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಸುದ್ದಿ ಓದಿದ್ದೀರಾ? : ಹಾಸ್ಯ ನಟನ ಕಾರು ಅಪಘಾತ : ಮಹಿಳೆ ಸಾವು, FIR ದಾಖಲು
ಈ ಆರೋಪಿಗಳು ಬೆಂಗಳೂರಿನಲ್ಲಿದ್ದುಕೊಂಡು ವಿದೇಶದಲ್ಲಿರುವವರಿಗೆ ಸಹಾಯ ಮಾಡುತ್ತಿದ್ದರು. ಬಂಧಿತ ಆರೋಪಿಗಳು ಬೆಂಗಳೂರಿನ ವಿದ್ಯಾರಣ್ಯಪುರ, ಯಲಹಂಕ ಭಾಗದಲ್ಲಿ ವಾಸವಾಗಿದ್ದರು. ಆ ಖತರ್ನಾಕ್ ಗ್ಯಾಂಗ್ ವಿದೇಶದಿಂದ ಬರುವ ಆದೇಶದಂತೆ ಬ್ಯಾಂಕ್ ಅಕೌಂಟ್ಗಳನ್ನ ಮ್ಯಾನೇಜ್ ಮಾಡುತ್ತಿದ್ದರು.