Wednesday, January 22, 2025

ಕೊಳ್ಳೇಗಾಲದಲ್ಲಿ ವೈದ್ಯೆ ಅನುಮಾನಸ್ಪದ ಸಾವು

ಚಾಮರಾಜನಗರ : ಅರವಳಿಕೆ ತಜ್ಞೆಯೊಬ್ಬರು ಅನುಮಾನಸ್ಪದವಾಗಿ ಮೃತಪಟ್ಟಿರುವ ಘಟನೆ ಇಂದು ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದಲ್ಲಿ ನಡೆದಿದೆ.

ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಯ ಅರವಳಿಕೆ ತಜ್ಞೆ  ಡಾ.ಸಿಂಧುಜಾ(28) ಮೃತ ದುರ್ದೈವಿ. ಇಂದು ಕರ್ತವ್ಯಕ್ಕೆ ಹಾಜರಾಗದೇ ಇದ್ದಿದ್ದರಿಂದ ಸಹೋದ್ಯೋಗಿಗಳು ಮನೆಗೆ ತೆರಳಿ ನೋಡಿದ ವೇಳೆ ಮೃತಪಟ್ಟಿರುವುದು ಗೊತ್ತಾಗಿದೆ.

ಸಿಂಧುಜಾ ಮೂಲತಃ ಚೆನ್ನೈನವರಾಗಿದ್ದು ಎಂಬಿಬಿಎಸ್ ಕೋರ್ಸ್ ಮುಗಿಸಿ ಸ್ನಾತಕೋತ್ತರ ಪದವಿ ಅಭ್ಯಾಸ ಮಾಡುತ್ತಿದ್ದರು. ಶಿಕ್ಷಣದ ಭಾಗವಾಗಿ ಕೊಳ್ಳೇಗಾಲದಲ್ಲಿ ಅರವಳಿಕೆ ವಿಭಾಗದಲ್ಲಿ ಕಾರ್ಯನಿರ್ವಾಹಣೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಸಿಂಧುಜಾ ಅವರ ಮೃತದೇಹ ನೆಲದ ಮೇಲೆ ಬಿದ್ದಿದ್ದು ಪಕ್ಕದಲ್ಲೇ ಸಿರಿಂಜ್, ಔಷಧಿ, ಚಾಕು ಇನ್ನಿತರ ವಸ್ತುಗಳಿದ್ದವು. ಸಿಂಧುಜಾ ಅವರಿಗೆ ಮುಂದಿನ ಜನವರಿಯಲ್ಲಿ ಮದುವೆ ಕೂಡ ನಿಶ್ಚಯವಾಗಿತ್ತು ಎಂದು ಮೂಲಗಳು ತಿಳಿಸಿವೆ. ಮೃತರ ಪೋಷಕರು ಚೆನೈನಿಂದ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ. ಕೊಳ್ಳೇಗಾಲ ಪಟ್ಟಣ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ‌.

RELATED ARTICLES

Related Articles

TRENDING ARTICLES