Sunday, January 5, 2025

ಕರ್ನಾಟಕ ಬಂದ್​: ಕಪ್ಪು ಬಟ್ಟೆ ಧರಿಸಿ ಪ್ರತಿಭಟಿಸಿದ ಕನ್ನಡ ಪರ ಹೋರಾಟಗಾರ ವಾಟಾಳ್​ ನಾಗರಾಜ್​

ಬೆಂಗಳೂರು : ಕನ್ನಡ ಒಕ್ಕೂಟ ಕರೆ ನೀಡಿದ ಅಖಂಡ ಕರ್ನಾಟಕ ಬಂದ್​ಗೆ ಯಶಸ್ಸಿಗೆ ರಾಜ್ಯದ ಜನತೆ ಗೌರವವನ್ನು ತಂದಿದ್ದಾರೆ ಇದಕ್ಕೆ ಜನತೆಯನ್ನು ಅಭಿನಂದಿಸುತ್ತೇನೆ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್​ ನಾಗರಾಜ್ ಹೇಳಿದರು.

ನಗರದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವದನ್ನು ವಿರೋಧಿಸಿ ಇಂದು ಕರೆ ನೀಡಿರುವ ಅಖಂಡ ಕರ್ನಾಟಕ ಬಂದ್​ ಗೆ ನ್ಯಾಯದೇವತೆಯ ಸಂಕೇತ, ಬುರ್ಕಾದ ಸಂಕೇತ, ನೀರಿಗಾಗಿ ಪರದಾಡುತ್ತಿರುವ ಮಹಿಳೆಯ ಸಂಕೇತವಾಗಿ ಕಪ್ಪು ಬಟ್ಟಯನ್ನು ಧರಿಸಿ ಪ್ರತಿಭಟನೆ ಮಾಡುತ್ತಿದ್ದೇನೆ.

ಇದನ್ನೂ ಓದಿ: ತಮಿಳುನಾಡು ರೈತರಗಾಗಿ ನಮ್ಮ ರೈತರ ಜೀವನ ಹಾಳು ಮಾಡುವುದು ಸರಿಯಲ್ಲ : ನಟಿ ಪೂಜಾಗಾಂಧಿ

ಅಖಂಡ ಕರ್ನಾಟಕ ಬಂದ್​ಗೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೇ, ಸರ್ಕಾರದ ಅಸಹಕಾರ, ವಿರೋಧ, ಪೊಲೀಸರ ಒತ್ತಡ ಇಡೀ ಕರ್ನಾಟಕ ಪೊಲೀಸ್​ ಇಲಾಖೆ ಬೆಂಗಳೂರು ಒಂದರಲ್ಲೇ 50 ಸಾವಿರ ಪೊಲೀಸ್​ ನಿಯೋಜನೆ ಮಾಡಿ ಮತ್ತು ಇಡೀ ಕರ್ನಾಟಕಕ್ಕೆ ಲಕ್ಷಾಂತರ ಪೊಲೀಸರನ್ನು ನಿಯೋಜನೆ ಮಾಡಿ ಹಾಕಿ ನಮ್ಮ ಬಂದ್​ ನ್ನು ಹತ್ತಿಕ್ಕಲು ಹುನ್ನಾರ ನಡೆಸುತ್ತಿದ್ದಾರೆ.

ಕನ್ನಡ ಒಕ್ಕೂಟ ಕರೆದ ಅಖಂಡ ಕರ್ನಾಟಕ ಬಂದ್​ಗೆ ರಾಜ್ಯದ ಜನತೆ ಉತ್ತಮ ಪ್ರತಿಕ್ರಿಯೆ ನೀಡಿದ್ದು ಬಂದ್​ ಯಶಸ್ಸಿಗೆ ಗೌರವವನ್ನು ತಂದಿದ್ದಾರೆ ಇದಕ್ಕೆ ನಾಡಿನ ಜನತೆಯನ್ನು ಅಭಿನಂದಿಸುತ್ತೇನೆ ಎಂದರು.

ಯಾವುದೇ ಕಾರಣಕ್ಕೂ ಕಾವೇರು ನೀರು ಬಿಡುವ ಪ್ರಶ್ನೆಯೆ ಇಲ್ಲ, ನಮ್ಮ ಕರವೇ ಮುಖಂಡರೂ ಕೂಡ ಇದಕ್ಕೆ ಸಾತ್​ ನೀಡಿದ್ದಾರೆ. ನಮ್ಮ ಬಂದ್​ ಗೆ ಅಡ್ಡಿಪಡಿಸಲು 144 ಸೆಕ್ಷನ್​ ಜಾರಿ ಮಾಡಿ ನಮ್ಮ ಹೋರಾಟವನ್ನು ಹತ್ತಿಕ್ಕಲು ಹೊರಟಿದೆ. ನಾಚಿಗೆಗೇಡು ನೀತಿ, ಇಬ್ಬಂದಿ ನೀತಿಯನ್ನು, ಗೃಹಸಚಿವರಾದ ಪರಮೇಶ್ವರ್​ ಮತ್ತು ಡಿಸಿಎಂ ಡಿಕೆ ಶಿವಕುಮಾರ್​ ಮತ್ತು ಸಿಎಂ ಸಿದ್ದರಾಮಯ್ಯ ಅಸಹಕಾರ ತೋರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡ.

RELATED ARTICLES

Related Articles

TRENDING ARTICLES