Wednesday, January 22, 2025

ವಿಶ್ವಕಪ್ : ನಾಳೆ ಭಾರತ-ಇಂಗ್ಲೆಂಡ್ ಮೊದಲ ಅಭ್ಯಾಸ ಪಂದ್ಯ

ಬೆಂಗಳೂರು : ಬಹು ನಿರೀಕ್ಷಿತ ವಿಶ್ವಕಪ್-2023 ಕ್ರಿಕೆಟ್ ಸಮರದ ಸಮಯ ಸಮೀಪಿಸಿದೆ. ಇಂದಿನಿಂದ ಅಭ್ಯಾಸ ಪಂದ್ಯಗಳು ಆರಂಭವಾಗಲಿದ್ದು, ಅಕ್ಟೋಬರ್ 5ರಿಂದ ಮೆಗಾ ಫೈಟ್ ಪ್ರಾರಂಭವಾಗಲಿದೆ.

ನಾಳೆ ಇಂಗ್ಲೆಂಡ್​ ವಿರುದ್ಧ ಭಾರತ ತಂಡ ವಿಶ್ವಕಪ್-2023ರ ಮೊದಲ ಅಭ್ಯಾಸ ಪಂದ್ಯವನ್ನು ಆಡಲಿದೆ. ಹೀಗಾಗಿ, ಎರಡು ತಂಡಗಳು ಅಸ್ಸಾಂನ ಗುವಾಹಟಿ ತಲುಪಿವೆ.

ನೆದರ್ಲೆಂಡ್ಸ್ ವಿರುದ್ಧ ಭಾರತ ತನ್ನ ಎರಡನೇ ಅಭ್ಯಾಸ ಪಂದ್ಯವನ್ನು ಅಕ್ಟೋಬರ್ 3ರಂದು ತಿರುವನಂತಪುರಂನಲ್ಲಿ ಆಡಳಿದೆ. ಆಲ್​ರೌಂಡರ್ ಅಕ್ಷರ್ ಪಟೇಲ್ ಗಾಯದ ಸಮಸ್ಯೆಯಿಂದ ಗುಣಮುಖರಾಗದ ಕಾರಣ ಅನುಭವಿ ಆಟಗಾರ ಆರ್​. ಅಶ್ವಿನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ಭಾರತ ತಂಡ :

ರೋಹಿತ್​​ ಶರ್ಮಾ (ನಾಯಕ), ಶುಭಮನ್​ ಗಿಲ್​, ವಿರಾಟ್​ ಕೋಹ್ಲಿ, ಶ್ರೇಯಸ್​ ಅಯ್ಯರ್​, ಇಶಾನ್​ ಕಿಶಾನ್​, ಕೆ.ಎಲ್​. ರಾಹುಲ್​, ಹಾರ್ದಿಕ್​ ಪಾಂಡ್ಯ, ಸೂರ್ಯಕುಮಾರ್​ ಯಾದವ್​, ರವೀಂದ್ರ ಜಡೇಜಾ, ಆರ್. ಅಶ್ವಿನ್, ಶಾರ್ದುಲ್​ ಠಾಕೂರ್​, ಜಸ್ಪ್ರೀತ್​ ಬೂಮ್ರಾ, ಮೊಹ್ಮದ್​ ಶಮಿ, ಮೊಹ್ಮದ್​ ಸಿರಾಜ್, ಕುಲ್ದೀಪ್​ ಯಾದವ್​

RELATED ARTICLES

Related Articles

TRENDING ARTICLES