Monday, December 23, 2024

ವೋಟ್ ಪಡೆದು ಕತ್ತು ಕುಯ್ಯುವ ಕೆಲಸ ಮಾಡುತ್ತಾರೆ : ಜೋಗಿ ಪ್ರೇಮ್

ಬೆಂಗಳೂರು : ಕಾವೇರಿ ವಿಚಾರವಾಗಿ ವೋಟ್​ ಪಡೆದು, ಕತ್ತು ಕುಯ್ಯುವ ಕೆಲಸ ಆಗುತ್ತಿದೆ ಎಂದು ಜನಪ್ರತಿನಿಧಿಗಳು ಹಾಗೂ ಸರ್ಕಾರದ ವಿರುದ್ಧ ನಿರ್ದೇಶಕ ಜೋಗಿ ಪ್ರೇಮ್​​​​​​​​ ಕಿಡಿಕಾರಿದ್ದಾರೆ.

ಕಾವೇರಿ ನೀರಿಗಾಗಿ ನಡೆಯುತ್ತಿರುವ ಮಂಡ್ಯ ಬಂದ್​ನಲ್ಲಿ ಮಾತನಾಡಿದ ಅವರು, ನಾನು ಹುಟ್ಟಿದ್ದು ಮಂಡ್ಯ ಜಿಲ್ಲೆ, ನಾವು ರೈತರ ಮಕ್ಕಳೆ. ಇವಾಗಲು ಎಮ್ಮೆ, ದನ ಸಾಕುತ್ತಿದ್ದೇನೆ ಎಂದು ಹೇಳಿದ್ದಾರೆ.

ದೇವರು ನಮ್ಮ ಮಂಡ್ಯ ಜಿಲ್ಲೆಗೆ ಹೋರಾಟದ ಶಾಪ ಕೊಟ್ಟಿದ್ದಾನೆ. ಮಂಡ್ಯದವರು ಡ್ರಾಮಾ ಮಾಡ್ಕೊಂಡು ಮಾತನಾಡಲ್ಲ. ಕುಡಿಯುವ ನೀರಿಗಾಗಿ ಹೋರಾಟ ಮಾಡುತ್ತಾರೆ. ಮಂಡ್ಯ ಜಿಲ್ಲೆಯ ಜನರು ಬೆಂಗಳೂರಿಗೆ ನೀರು ಕೊಡುತ್ತಾರೆ. ಯಾವುದೇ ಪಕ್ಷ, ಯಾರೇ ಸಿಎಂ ಆದರು ರಾಜಕಾರಣ ಮಾಡುತ್ತಾರೆ ಎಂದು ತಿಳಿಸಿದ್ದಾರೆ.

ನೀರು ನಿಲ್ಲಿಸಿ ರೈತರನ್ನ ಉಳಿಸಿ

ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರು ನೀರು ಬಿಟ್ಟಿಲ್ಲ, ಇವರು ಬಿಡಬಾರದಿತ್ತು. ಲೋಕಸಭಾ ಚುನಾವಣೆ ಬರುತ್ತಿದ್ದೆ, ರಾಜಕೀಯ ಮಾಡುತ್ತಾರೆ. ರೈತರ ಜೊತೆ ನಾವು ಸದಾ ಇರುತ್ತೇವೆ. ಮಂಡ್ಯ ಜನರನ್ನು ಹೊಗಳಿ ವೋಟ್ ಪಡೆದು ಕತ್ತು ಕುಯ್ಯುವ ಕೆಲಸ ಮಾಡ್ತಾರೆ. ತಕ್ಷಣವೇ ನೀರು ನಿಲ್ಲಿಸಿ ರೈತರನ್ನ ಉಳಿಸಿ ಎಂದು ಆಗ್ರಹಿಸಿದ್ದಾರೆ.

RELATED ARTICLES

Related Articles

TRENDING ARTICLES