Sunday, January 19, 2025

ನವಗ್ರಹ ಪಾರ್ಟ್-2 ಫಿಕ್ಸ್? : ಸಿದ್ಧತೆ ಶುರು ಎಂದ ನಿರ್ದೇಶಕ ದಿನಕರ್

ಬೆಂಗಳೂರು : ನವಗ್ರಹ..! 15 ವರ್ಷಗಳ (2008ರಲ್ಲಿ)ಹಿಂದೆ ಕನ್ನಡ ಚಿತ್ರರಂಗದಲ್ಲಿ ಹೊಸ ಭಾಷ್ಯ ಬರೆದ ಚಿತ್ರ. ಸ್ಯಾಂಡಲ್​ವುಡ್​ನ ದಿಗ್ಗಜ ಖಳನಟರ ಮಕ್ಕಳೆಲ್ಲಾ ಸೇರಿಕೊಂಡು ನಟಿಸಿದ್ದ ನವಗ್ರಹ ಚಿತ್ರ ಭಾರಿ ಯಶಸ್ಸು ಕಂಡಿತ್ತು.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಈ ಚಿತ್ರದಲ್ಲಿ ನೆಗೆಟಿವ್ (ಖಳನಾಯಕ) ಶೇಡ್​​ನ ಪಾತ್ರದಲ್ಲಿ ನಟಿಸಿದ್ದರು. ಇದೀಗ, ಈಗ 15 ವರ್ಷಗಳ ಬಳಿಕ ನವಗ್ರಹ ಪಾರ್ಟ್​-2ಗೆ ಸಿದ್ಧತೆ ನಡೆಯುತ್ತಿದೆ ಎಂದು ನಿರ್ದೇಶಕ ದಿನಕರ್ ತೂಗುದೀಪ ಅವರು ಹೇಳಿದ್ದಾರೆ.

ನವಗ್ರಹ-2 ಚಿತ್ರ ಮಾಡುವ ಪ್ಲಾನ್ ಇದೆ. ಆ ಒಂದು ಚಿತ್ರದ ಬಗ್ಗೆ ಕಲ್ಪನೆ ಬೇರೆ ಇದೆ. ಅದರ ಬಗ್ಗೆ ಸದ್ಯ ಏನೂ ಮಾಡುತ್ತಿಲ್ಲ. ಸದ್ಯ ರಾಯಲ್ ಸಿನಿಮಾದ ಕೆಲಸ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಇನ್ನೂ, ರಾಯಲ್ ಚಿತ್ರದ ಕೊನೆಯ ಹಂತದ ಚಿತ್ರೀಕರಣ ಇತ್ತೀಚೆಗೆ ಪೂರ್ಣ ಮಾಡಿದ್ದಾರೆ.

ನವಗ್ರಹದಲ್ಲಿ ಇದ್ದವರು ಯಾರು?

ನವಗ್ರಹ ಚಿತ್ರದಲ್ಲಿ ತೂಗುದೀಪ್ ಶ್ರೀನಿವಾಸ್ ಪುತ್ರ ದರ್ಶನ್, ಟೈಗರ್ ಪ್ರಭಾಕರ್ ಪುತ್ರ ವಿನೋದ್ ಪ್ರಭಾಕರ್‌, ಕೀರ್ತಿ ರಾಜ್ ಅವರ ಪುತ್ರ ಧರ್ಮ ಕೀರ್ತಿ ರಾಜ್, ಸುಧೀರ್ ಪುತ್ರ ತರುಣ್ ಸುಧೀರ್, ಲೋಕೇಶ್ ಅವರ ಪುತ್ರ ಸೃಜನ್ ಲೋಕೇಶ್, ಸುಂದರಕೃಷ್ಣ ಅರಸ್ ಅವರ ಪುತ್ರ ನಾಗೇಂದ್ರ ಅರಸ್, ದಿನೇಶ್ ಅವರ ಮಗ ಗಿರಿ ದಿನೇಶ್, ಶರ್ಮಿಳಾ ಮಾಂಡ್ರೆ ಹಾಗೂ ವರ್ಷ ಮುಖ್ಯಭೂಮಿಕೆಯಲ್ಲಿದ್ದರು.

ಮತ್ತೆ ವಿಲನ್ ಆಗ್ತಾರಾ ದಚ್ಚು?

ನವಗ್ರಹ ಪಾರ್ಟ್​-2 ಚಿತ್ರದಲ್ಲಿ ನಲ್ಲಿ ಯಾವ ಯಾವ ನಟರು ಇರಲಿದ್ದಾರೆ? ಕಾಸ್ಟಿಂಗ್ ಹೇಗಿರುತ್ತದೆ? ಮತ್ತೆ ನಟ ದರ್ಶನ್ ನೆಗೆಟಿವ್ ಶೇಡ್​​ನಲ್ಲೇ ಕಾಣಿಸಲಿದ್ದಾರಾ? ಎಂಬ ಬಗ್ಗೆ ನಿರ್ದೇಶಕ ದಿನಕರ್ ತೂಗುದೀಪ ಅವರು ಯಾವುದೇ ಮಾಹಿತಿ ನೀಡಿಲ್ಲ.

RELATED ARTICLES

Related Articles

TRENDING ARTICLES