Wednesday, January 22, 2025

ಆಟವಾಡುವಾಗ ಕಾಲುಜಾರಿ ನಾಲೆಗೆ ಬಿದ್ದು ಬಾಲಕಿ ಸಾವು

ಹಾಸನ : ಸ್ನೇಹಿತರೊಂದಿಗೆ ಆಟವಾಡುವಾಗ ಬಾಲಕಿ ಕಾಲುಜಾರಿ ನಾಲೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ಹಾಸನದ ಅರಕಲಗೂಡು ತಾಲೂಕಿನ ಮಧುರನಹಳ್ಳಿಯಲ್ಲಿ ನಡೆದಿದೆ.

5 ವರ್ಷದ ಸುಪ್ರಿತಾ ಮೃತಪಟ್ಟ ದುರ್ದೈವಿ ಬಾಲಕಿ. ಈಕೆ ಮಧುರನಹಳ್ಳಿ ಗ್ರಾಮದ ರೇವಣ್ಣ ಹಾಗೂ ಭಾಗ್ಯ ದಂಪತಿ ಪುತ್ರಿ. ಹಳ್ಳಿಮೈಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಶಾಲೆಗೆ ರಜೆ ಇದ್ದ ಕಾರಣ ಸುಪ್ರಿತಾ, ಗ್ರಾಮದ ಸಮೀಪವಿರುವ ನಾಲೆಯ ಬಳಿ ಸ್ನೇಹಿತರೊಂದಿಗೆ ಆಟವಾಡುತ್ತಿದ್ದಳು. ಈ ವೇಳೆ ಸುಪ್ರಿತಾ ಕಾಲುಜಾರಿ ನಾಲೆಗೆ ಬಿದ್ದಿದ್ದು, ಹರಿಯುತ್ತಿದ್ದ ನೀರಿನಲ್ಲಿ ಮುಳುಗಿ ಪ್ರಾಣಬಿಟ್ಟಿದ್ದಾಳೆ.

ಹಾರಂಗಿ ಬಲದಂಡೆ ನಾಲೆಯಲ್ಲಿ ಬಾಲಕಿ ಮುಳುಗಿ ಮೃತಪಟ್ಟಿದ್ದಾಳೆ. ಮಗುವಿನ ಮೃತದೇಹಕ್ಕಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಆರು ಕಿಲೋಮೀಟರ್ ವರೆಗೂ ಶೋಧಕಾರ್ಯ ನಡೆಸಿದ್ದಾರೆ. ಇನ್ನೂ ಬಾಲಕಿ ಮೃತದೇಹ ಪತ್ತೆಯಾಗಿಲ್ಲ. ಈ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES