Thursday, December 26, 2024

ಅಬ್ಬಬ್ಬಾ..! ಬಲೆಗೆ ಬಿತ್ತು 350 ಕೆಜಿ ‘ರಕ್ಕಸ’ ಮುರು ಮೀನು

ಮಂಗಳೂರು : ಆಳ ಸಮುದ್ರದಲ್ಲಿ ಬೇಟೆಗೆ ತೆರಳಿದ್ದ ಮೀನುಗಾರರ ತಂಡಕ್ಕೆ ಬೃಹತ್​ ಗಾತ್ರದ ಮೀನೊಂದು ಬಲೆಗೆ ಬಿದ್ದಿದೆ. ಸುಮಾರು 350 ಕೆಜಿ ತೂಕದ ಮುರು ಮೀನು ಬಲೆಗೆ ಬಿದ್ದಿದೆ.

ಮಂಗಳೂರಿನಿಂದ ಆಳ ಸಮುದ್ರಕ್ಕೆ ಮೀನುಗಾರಿಕೆಗೆ ಹೋದಾಗ ಮೊದಲ ಬಾರಿಗೆ ದೊಡ್ಡ ಗಾತ್ರದ ಮುರು ಮೀನು ಸಿಕ್ಕಿಬಿದ್ದಿದೆ. ಒಂದು ಕೆಜಿಗೆ 200 ರೂಪಾಯಿ ಬೆಳೆಬಾಳುವ ಮುರು ಮೀನು ಇದಾಗಿದೆ. ಈ ಮುರು ಮೀನನ್ನು ಐದಾರು ಮಂದಿ ಮೀನುಗಾರರು ಟೆಂಪೊಗೆ ಹಾಕಲು ಹರಸಾಹಸ ಪಡುವುದು ದೃಶ್ಯದಲ್ಲಿ ಕಂಡು ಬಂದಿದೆ.

ಒಟ್ಟಿನಲ್ಲಿ ಮೀನುಗಾರರು ಒಂದೇ ಮೀನಿನಿಂದ ಭರ್ಜರಿ ಆದಾಯ ಗಳಿಸಿದ್ದಾರೆ. ಸಾಮಾನ್ಯವಾಗಿ ಸಣ್ಣ ಗಾತ್ರದ ಮುರು ಮೀನು ಬೇಟೆಗೆ ಸಿಗುತ್ತದೆ. ಆದರೆ, ಈ ಗಾತ್ರದ ದೊಡ್ಡದಾದ ಮೀನು ಸಿಕ್ಕಿರುವುದು ಇದೇ ಮೊದಲು. ಸಾಮಾನ್ಯವಾಗಿ ಈ ಜಾತಿಯ ಸಣ್ಣ ಗಾತ್ರದ ಮುರು ಮೀನು ಎಲ್ಲೆಡೆ ನೋಡಲು ಸಿಗುತ್ತದೆ‌.

ಉಳ್ಳಾಲದಲ್ಲಿ  ಇತ್ತೀಚೆಗೆ 75 ಕೆಜಿಯ ತೂಕದ ಬೃಹತ್ ಪಿಲಿ ತೊರಕೆ ಮೀನು ಬಲೆಗೆ ಬಿದ್ದ ಬೆನ್ನಿಗೆ ಇದೀಗ ಮುರು ಮೀನು ವಿಡಿಯೋ ವೈರಲ್ ಆಗಿದೆ. ಮಂಗಳೂರು ಮೀನುಗಾರಿಕಾ ಬಂದರಿನಲ್ಲಿ ಈ ಘಟನೆ ನಡೆದಿದೆ.

RELATED ARTICLES

Related Articles

TRENDING ARTICLES