Sunday, December 22, 2024

ಚಿಕ್ಕು ಚಿತ್ರದ ಪತ್ರಿಕಾಗೋಷ್ಟಿಗೆ ಕರವೇ ಮುಖಂಡರಿಂದ ಅಡ್ಡಿ: ಎದ್ದು ನಡೆದ ನಟ ಸಿದ್ದಾರ್ಥ!

ಬೆಂಗಳೂರು : ಬಹುಭಾಷಾ ಚಿತ್ರ ಚಿಕ್ಕು ಸಿನಿಮಾ ಪ್ರೋಮೋಷನ್​ ವೇಳೆ ಕರವೇ ಮುಖಂಡರು ಕಾರ್ಯಕ್ರಮಕ್ಕೆ ಅಡ್ಡಿಪಡಿಸಿರುವ ಘಟನೆ ಇಂದು ಮಲ್ಲೇಶ್ವರಂನಲ್ಲಿ ನಡೆದಿದೆ.

ನಟ ಸಿದ್ದಾರ್ಥ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಬಹುಭಾಷಾ ಚಿತ್ರ ಚಿಕ್ಕು ಸಿನಿಮಾ ಇಂದು ತೆರೆಕಂಡಿದ್ದು ಈ ಕುರಿತು ನಗರದ ಮಲ್ಲೇಶ್ವರಂ ನ ಎಸ್​.ಆರ್.ವಿ ಚಿತ್ರಮಂದಿರದಲ್ಲಿ ನಟ ಸಿದ್ದಾರ್ಥ ಪತ್ರಿಕಾಗೋಷ್ಟಿ ನಡೆಸುತ್ತಿದ್ದರು.  ಈ ವೇಳೆ ಸ್ಥಳಕ್ಕಾಗಮಿಸಿದ ಕರವೇ ಮುಖಂಡರು ಪತ್ರಿಕಾಗೋಷ್ಟಿಗೆ ಅಡ್ಡಿಪಡಿಸಿ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ : ಕರ್ನಾಟಕ ಬಂದ್​ ಗೆ ಕನ್ನಡ ಚಿತ್ರರಂಗ ಬೆಂಬಲ : ಎನ್.ಎಂ ಸುರೇಶ್​

ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ವಿಚಾರವಾಗಿ ನಾಳೆ ಕರ್ನಾಟಕದಾದ್ಯಂತ ಬಂದ್​ ಗೆ ಕರೆ ಕೊಟ್ಟಿದ್ದೇವೆ, ಕನ್ನಡ ಚಿತ್ರರಂಗವೂ ಈ  ಬಂದ್​ ಗೆ ಬೆಂಬಲ ಸೂಚಿಸಿದೆ ಇಂಥ ಸಂದರ್ಭದಲ್ಲಿ ಇದೆಲ್ಲಾ ಬೇಕಾ ಎಂದು ತಮಿಳು ನಟ ಸಿದ್ದಾರ್ಥ ಪತ್ರಿಕಾಗೋಷ್ಟಿಗೆ ಅಡ್ಡಿ ಪಡಿಸಿದರು.

ಈ ಸಂದರ್ಭದಲ್ಲಿ ವೇದಿಕೆ ಮೇಲೆ ಏನು ನಡೆಯುತ್ತಿದೆ ಎನ್ನುವುದು ಅರ್ಥವಾಗದೇ ಸುಮ್ಮನೆ ಕುಳಿತಿದ್ದ ನಟ ಸಿದ್ದಾರ್ಥ ಬಳಿಕ ಪತ್ರಿಕಾಗೋಷ್ಟಿಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಪತ್ರಕರ್ತರಿಗೆ ನಮಸ್ಕರಿ ಎದ್ದು ನಡೆದಿದ್ದಾರೆ.

RELATED ARTICLES

Related Articles

TRENDING ARTICLES