ಕಳೆದ 375 ವರ್ಷಗಳಿಂದ ಕಾಣೆಯಾಗಿದ್ದ ಜಗತ್ತಿನ 8ನೇ ಖಂಡವನ್ನು ವಿಜ್ಞಾನಿಗಳು ಇದೀಗ ಪತ್ತೆಹಚ್ಚಿದ್ದಾರೆ.
ಈ ಹೊಸ ಖಂಡದ ಬಹುತೇಕ ಭಾಗ ನೀರಿನಲ್ಲಿ ಮುಳುಗಡೆಯಾಗಿದೆ. ಭೂವಿಜ್ಞಾನಿಗಳು ಮತ್ತು ಭೂಕಂಪಶಾಸ್ತ್ರಜ್ಞರ ಸಣ್ಣ ತಂಡವು ಹೊಸದಾಗಿ ಪತ್ತೆಹಚ್ಚಿದ ಝೀಲ್ಯಾಂಡಿಯಾ ಅಥವಾ ಟೆ ರಿಯು-ಎ-ಮೌಯಿ ಖಂಡದ ನಕ್ಷೆಯನ್ನು ರಚಿಸಿದೆ ಎಂದು Phys.org ವರದಿ ಮಾಡಿದೆ.
ಇದನ್ನೂ ಓದಿ : ರಜನಿಕಾಂತ್ ಚಿತ್ರಕ್ಕೆ ಕರ್ನಾಟಕದಲ್ಲಿ ಬಹಿಷ್ಕಾರ ಹಾಕಿ: ವಾಟಾಳ್ ನಾಗರಾಜ್!
ಸಮುದ್ರದ ತಳದಿಂದ ಹೂಳೆತ್ತುವಾಗ ವಶಕ್ಕೆ ಪಡೆದ ಕಲ್ಲಿನ ಮಾದರಿಗಳಿಂದ ಪಡೆದ ಡೇಟಾವನ್ನು ಬಳಸಿ ಸಂಶೋಧಕರು ಹೊಸ ಖಂಡವನ್ನು ಪತ್ತೆ ಮಾಡಿದ್ದಾರೆ. ಇದರ ಕುರಿತಾದ ಸಂಶೋಧನಾ ವರದಿಯು ಜರ್ನಲ್ ಟೆಕ್ಟೊನಿಕ್ಸ್ನಲ್ಲಿ ಪ್ರಕಟವಾಗಿದೆ.