Sunday, January 19, 2025

ಹಾಲಿವುಡ್ ನಿರ್ದೇಶಕ JJ ಪೆರ್ರಿ ಭೇಟಿಯಾದ ಯಶ್!

ಬೆಂಗಳೂರು : ನಟ ಯಶ್​ ಲಂಡನ್​ನಲ್ಲಿ ಹಾಲಿವುಡ್​ ಖ್ಯಾತ ಸಾಹಸ ನಿರ್ದೇಶಕ ಹಾಗೂ ಮಾರ್ಷಲ್​​ ಆರ್ಟಿಸ್ಟ್​, ಹಾಲಿವುಡ್ ಆಕ್ಷ್ಯನ್​ ಸಿನಿಮಾಗಳ ನಿರ್ದೇಶಕ ಜೆಜೆ ಪೆರ್ರಿ ಅರವನ್ನು ಭೇಟಿ ಮಾಡಿರುವುದು ಭಾರಿ ಕುತೂಹಲ ಮೂಡಿಸಿದೆ.

ಕೆಜಿಎಫ್‌ ಚಾಪ್ಟರ್ 1, ಕೆಜಿಎಫ್ ಚಾಪ್ಟರ್ 2 ಯಶಸ್ಸಿನ ನಂತರ ನಟ ಯಶ್ ಅವರ ಮುಂದಿನ ಚಿತ್ರ ಯಾವುದು? ಎಂಬ ಕುತೂಹಲಕ್ಕೆ ಹಾಲಿವುಡ್​ ನಿರ್ದೇಶಕರ ಭೇಟಿ ಮತ್ತಷ್ಟು ಕುತೂಹಲ ಮೂಡಿಸಿದೆ. ಈ ಭೇಟಿಯ ಚಿತ್ರವನ್ನು ಸ್ವತಃ ಜೆಜೆ ಪೆರ್ರಿ ಅವರೇ ತನ್ನ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ‘ಸಹೋದರನ ಜೊತೆ ಲಂಡನ್‌ನಲ್ಲಿ’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ : ರಜನಿಕಾಂತ್ ಚಿತ್ರಕ್ಕೆ ಕರ್ನಾಟಕದಲ್ಲಿ ಬಹಿಷ್ಕಾರ ಹಾಕಿ: ವಾಟಾಳ್ ನಾಗರಾಜ್​!

ಇದರೊಂದಿಗೆ ಯಶ್ ಮುಂದಿನ ಚಿತ್ರ ಬಹುತೇಕ ಹಾಲಿವುಡ್ ಮಟ್ಟದ್ದು ಅಥವಾ ಹಾಲಿವುಡ್‌ನಲ್ಲಿ ಮಾಡಬಹುದು ಎಂದು ಚರ್ಚಿಸುತ್ತಿದ್ದಾರೆ. ಆದರೆ, ಯಶ್ ಈ ಬಗ್ಗೆ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ಕಳೆದ ವರ್ಷವೂ ಯಶ್ ಹಾಲಿವುಡ್‌ನ ಕೆಲ ನಿರ್ದೇಶಕರು ಮತ್ತು ತಂತ್ರಜ್ಞರನ್ನು ಭೇಟಿಯಾಗಿದ್ದರು.

RELATED ARTICLES

Related Articles

TRENDING ARTICLES