ಅಮೇರಿಕ: ಜಾಗತಿಕವಾಗಿ ಇಂಟರ್ನೆಟ್ ಅಲ್ಲಿ ಅತಿ ಹೆಚ್ಚು ಬಳಕೆಯಲ್ಲಿರುವ ಸರ್ಚ್ ಎಂಜಿನ್ ಗೂಗಲ್ ಇಂದು 25 ವರ್ಷವನ್ನು ಪೂರೈಸಿದೆ.
ಬುಧವಾರ ವಿಭಿನ್ನವಾದ ಡೂಡಲ್‌ನೊಂದಿಗೆ ಗೂಗಲ್ ತನ್ನ 25ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದೆ. ಗೂಗಲ್ ಈ ಬಗ್ಗೆ ತನ್ನ ಬ್ಲಾಗ್‌ನಲ್ಲಿ ಬರೆದುಕೊಂಡಿದೆ. ಕಳೆದ 25 ವರ್ಷಗಳಲ್ಲಿ ಕಂಪನಿ ಬೆಳೆದು ಬಂದ ಹಾದಿ, 1998ರಿಂದ 2023ರ ವರೆಗೆ ತನ್ನ ಬದಲಾದ ಲೋಗೋಗಳನ್ನು ತೋರಿಸುವ ಡೂಡಲ್ ಅನ್ನು ತನ್ನ ಬ್ಲಾಗ್‌ನಲ್ಲಿ ಹಂಚಿಕೊಂಡಿದೆ.
ಇದನ್ನೂ ಓದಿ : ಸಾಲುಮರದ ತಿಮ್ಮಕ್ಕ ಆರೋಗ್ಯದಲ್ಲಿ ಏರುಪೇರು!
90ರ ದಶಕದ ಉತ್ತರಾರ್ಧದಲ್ಲಿ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಕಂಪ್ಯೂಟರ್ ವಿಜ್ಞಾನ ಕಾರ್ಯಕ್ರಮದಲ್ಲಿ ಭೇಟಿಯಾದ ಡಾಕ್ಟರೇಟ್ ವಿದ್ಯಾರ್ಥಿಗಳಾದ ಸೆರ್ಗೆ ಬ್ರಿನ್ ಮತ್ತು ಲ್ಯಾರಿ ಪೇಜ್ ಅವರು ಗೂಗಲ್ ಅನ್ನು ಅಭಿವೃದ್ಧಿಪಡಿಸಿದರು.
Google turns 25 this month 🎉
CEO @SundarPichai looks back on the big questions that led us to where we are today, and what the next 25 years could look like ↓ https://t.co/gftKdUAE9x— Google (@Google) September 5, 2023