ಮಂಡ್ಯ : ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಸುಪ್ರೀಂಕೋರ್ಟ್ ಆದೇಶ ಮಾಡಿರುವುದು ಅನ್ನದಾತರನ್ನು ಕೆರಳುವಂತೆ ಮಾಡಿದೆ. ದಿನದಿಂದ ದಿನಕ್ಕೆ ಮಂಡ್ಯದಲ್ಲಿ ಕಾವೇರಿ ಕಿಚ್ಚು ಜೋರಾಗಿದ್ದು, ರೈತರ ಹೋರಾಟಕ್ಕೆ ಕಮಲಪಡೆ ಹಾಗೂ ಚಿತ್ರನಟರು ಸಾಥ್ ನೀಡಿದ್ದಾರೆ. ಹೋರಾಟದ ಕಾವು ಉಗ್ರ ಸ್ವರೂಪ ಪಡೆದಿತ್ತು.
ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರು ವಿನೂತನವಾಗಿ ಚಡ್ಡಿ ಚಳುವಳಿ ನಡೆಸಿದರು. ಚಡ್ಡಿ ಚಳುವಳಿಗೆ ಮಾಜಿ ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯಣ, ಶಾಸಕ ಬಿ.ವೈ. ವಿಜಯೇಂದ್ರ ಸಾಥ್ ನೀಡಿದರು. ಮಂಡ್ಯದ ಬಿಜೆಪಿ ಕಚೇರಿಯಿಂದ ಸಂಜಯ್ ಸರ್ಕಲ್ ಮೂಲಕ ಹಿತರಕ್ಷಣಾ ಸಮಿತಿ ನಡೆಸುತ್ತಿರೋ ವಿಶ್ವೇಶ್ವರಯ್ಯ ಪ್ರತಿಮೆವರೆಗೂ ಚಡ್ಡಿಚಳುವಳಿ ನಡೆಸಿ, ರೈತರ ಹೋರಾಟಕ್ಕೆ ಬೆಂಬಲ ನೀಡಿದರು.
ಸಂಕಷ್ಟ ಸೂತ್ರ ಅನಿರ್ವಾಯ
ಇನ್ನು, ಕಾವೇರಿಗಾಗಿ ಹೋರಾಡುತ್ತಿರುವ ಮಂಡ್ಯ ರೈತರಿಗೆ ಹಿರಿಯನಟಿ ಲೀಲಾವತಿ ಹಾಗೂ ನಟ ವಿನೋದ್ ರಾಜ್ ಕೂಡ ಸಾಥ್ ನೀಡಿದರು. ಇದೇ ವೇಳೆ ಮಾತನಾಡಿದ ನಟ ವಿನೋಧ್ ರಾಜ್, ಪ್ರತಿಬಾರಿ ಕಾವೇರಿ ವಿಚಾರದಲ್ಲಿ ನಮಗೆ ಅನ್ಯಾಯವಾಗುತ್ತಿದೆ. ಹೀಗಾಗಿ, ಸಂಕಷ್ಟ ಸೂತ್ರ ಅನಿರ್ವಾಯ ಎಂದರು.
ಮಂಡ್ಯ, KR ಪೇಟೆ, ಮಳವಳ್ಳಿ ಬಂದ್
ಇನ್ನು, ಇಂದು ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನ ವಿರೋಧಿಸಿ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ, ಮಳವಳ್ಳಿ ಬಂದ್‌ಗೆ ವಿವಿಧ ಸಂಘಟನೆಗಳು ಕರೆ ನೀಡಿವೆ. ಬೆಳಗ್ಗೆ 8ರಿಂದ ಸಂಜೆ 6ರವೆಗೂ ಅಗತ್ಯಸೇವೆಗಳನ್ನು ಹೊರತುಪಡಿಸಿ ಉಳಿದಂತೆ ಎಲ್ಲ ಸೇವೆಗಳು ಬಂದ್ ಆಗಲಿವೆ. ಒಟ್ಟಾರೆ, ಮಂಡ್ಯದಲ್ಲಿ ಕಾವೇರಿ ಕಿಚ್ಚು ದಿನೇದಿನೆ ಹೆಚ್ಚಾಗುತ್ತಿದ್ದು, ಕಾವೇರಿಗಾಗಿಯ ಈ ಹೋರಾಟ ಎಲ್ಲಿಗೆ ಹೋಗಿ ಮುಟ್ಟುತ್ತದೆ ಎಂದು ಕಾದುನೋಡಬೇಕಿದೆ.