ಬೆಂಗಳೂರು : ಕಾವೇರಿ ನೀರಿಗಾಗಿ ಇಂದು ಬೆಂಗಳೂರು ಬಂದ್ ಇದ್ದರೂ ಬಸ್, ಆಟೋ, ಟ್ಯಾಕ್ಸಿಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ.
ಬೆಂಗಳೂರಿನ ಮೆಜೆಸ್ಟಿಕ್, ಆನಂದ್ ರಾವ್ ವೃತ್ತ, ಶಾಂತಿನಗರ, ಯಶವಂತಪುರದಲ್ಲಿ ಆಟೋಗಳು ರಸ್ತೆಗಿಳಿದಿವೆ. ಹೈಕೋರ್ಟ್ ಬಂದ್ಗೆ ತಡೆ ನೀಡಿರುವ ಹಿನ್ನಲೆ ಬಿಎಂಟಿಸಿ ಹಾಗೂ ಕೆಎಸ್ಸಾರ್ಟಿಸಿ ಬಸ್ಗಳು ಎಂದಿನಂತೆ ಕಾರ್ಯಚರಣೆ ನಡೆಸುತ್ತಿವೆ. ಬಿಎಂಟಿಸಿ ಬಸ್ಗಳು ನಗರದ ವಿವಿಧ ಪ್ರದೇಶಗಳಲ್ಲಿ ಸಂಚಾರ ನಡೆಸುತ್ತಿವೆ.
ಕೆಲವು ಹೋಟೆಲ್ಗಳು ಹಾಗೂ ಪೆಟ್ರೋಲ್ ಬಂಕ್ಗಳು ಬೆಳಗ್ಗೆ 6 ಗಂಟೆಯಿಂದಲೇ ಓಪನ್ ಆಗಿವೆ. ಬಂದ್ಗೆ ಖಾಸಗಿ ಸಾರಿಗೆ ಒಕ್ಕೂಟ ಬೆಂಬಲ ಸೂಚಿಸಿದ್ದರೂ ವಾಹನಗಳು ರಸ್ತೆಗಿಳಿದಿವೆ.
90ಕ್ಕೂ ಹೆಚ್ಚು ಸಂಘಟನೆ ಬೆಂಬಲ
ಬೆಂಗಳೂರು ಬಂದ್ಗೆ 90ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ಘೋಷಿಸಿವೆ. ರಾಮನಗರ ಹಾಗೂ ಮಂಡ್ಯ ಜಿಲ್ಲೆಯ ಮದ್ದೂರು, ಮಳವಳ್ಳ , ಕೆ.ಆರ್. ಪೇಟೆಯಲ್ಲಿ ಬಂದ್ ನಡೆಸಲು ಸ್ಥಳೀಯ ಸಂಘಟನೆಗಳು ನಿರ್ಧರಿಸಿವೆ.