Thursday, December 19, 2024

ಕಾಂಗ್ರೆಸ್ ನಾಯಕರು ಎಲ್ಲಿ ಹೋಗಿದ್ದಾರೆ? : ವಿಜಯೇಂದ್ರ ಕಿಡಿ

ಮಂಡ್ಯ : ರಾಜಕಾರಣ ಮಾಡಲು ಹೋರಾಟದಲ್ಲಿ ಪಾಲ್ಗೊಳ್ಳಲಿಲ್ಲ. ದೇಶಕ್ಕೆ ಅನ್ನಕೊಡುವ ರೈತರ ಪರವಾಗಿ ಬಂದಿದ್ದೇವೆ. ಅವರ ಸ್ಥಿತಿ ಕಂಡರೆ ಹೊಟ್ಟೆ ಉರಿಯುತ್ತದೆ ಎಂದು ಶಾಸಕ ಬಿ.ವೈ. ವಿಜಯೇಂ‌ದ್ರ ಬೇಸರಿಸಿದರು.

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಗೆ ಮುನ್ನ ರೈತರ ಪರ ಪಾದಯಾತ್ರೆ ಮಾಡಿದ್ರು. ರೈತರು ಸಾಕಷ್ಟು ನೀರಿಕ್ಷೆ ಇಟ್ಟುಕೊಂಡಿದ್ರು. ಆದರೆ, ಎಲ್ಲವೂ ಹುಸಿಯಾಗಿದೆ. ರೈತರು ಬೀದಿಗೆ ಬರುವ ಪರಿಸ್ಥಿತಿ ಬಂದಿದೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ಮುಖಂಡರು ಎಲ್ಲಿ ಹೋಗಿದ್ದಾರೆ. ಅಧಿಕಾರಕ್ಕೆ ಬಂದು ಸ್ವಾರ್ಥ ರಾಜಕಾರಣಕ್ಕಾಗಿ ತಮಿಳಿನಾಡಿನ ರಕ್ಷಣೆ ಮಾಡುತ್ತಿದ್ದಾರೆ. ಕಾವೇರಿ ಕೊಳ್ಳದ ರೈತರು ಒಂದು ಬೆಳೆ ಬೆಳೆದಿಲ್ಲ. ತಮಿಳುನಾಡಿನ ಅಧಿಕಾರಿಗಳು ದೆಹಲಿಗೆ ಹೋಗಿ ಸಭೆಯಲ್ಲಿ ಭಾಗವಹಿಸಿದ್ದರೆ, ರಾಜ್ಯದ ಅಧಿಕಾರಗಳನ್ನು ಎಸಿ ರೂಮ್​ನಲ್ಲಿ ಕೂರಿಸಿ ಕಾನ್ಫರೆನ್ಸ್ ನಲ್ಲಿ ಭಾಗಿಯಾಗುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಸರ್ಕಾರಕ್ಕೆ ಎಚ್ಚರಿಕೆ ಕೊಡುತ್ತೇನೆ

ನೀರು ಕೊಡುವುದಿಲ್ಲ ಅಂತ ಹೇಳಿ ರಾತ್ರೋರಾತ್ರಿ ನೀರು ಹರಿಸಿದ್ದಾರೆ. ರೈತರ ಬಗ್ಗೆ ಯಾಕೆ ಇಷ್ಟು ಅಸಡ್ಡೆ ತೋರಿಸುತ್ತೀದ್ದೀರಿ. ರಾಜಕಾರಣ ಇರುತ್ತದೆ ಹೋಗುತ್ತದೆ, ಅಧಿಕಾರ ಶಾಶ್ವತವಲ್ಲ. ಅಧಿಕಾರದಲ್ಲಿ ಇದ್ದಾಗ ರೈತರ ಪರ ಯಾವ ರೀತಿ ನಡೆದುಕೊಳ್ಳುತ್ರೇವೆ ಎಂಬುದು ಮುಖ್ಯ. ಯಡಿಯೂರಪ್ಪನವರು ನಾಳಿನ ಬಂದ್ ಗೆ ಬೆಂಬಲ ಕೊಟ್ಟಿದ್ದಾರೆ. ಸರ್ಕಾರಕ್ಕೆ ಎಚ್ಚರಿಕೆ ಕೊಡುತ್ತೇನೆ, ಕಾವೇರಿಕೊಳ್ಳದ ರೈತರಿಗೆ ರಕ್ಷಣೆ ಕೊಡುವ ಕೆಲಸ ಮಾಡಬೇಕು. ರೈತರ ಹೋರಾಟ ಇಷ್ಟಕ್ಕೆ ಸಿಮಿತವಾಗಬಾರದು. ನಾಳಿನ ಹೋರಾಟಕ್ಕೆ ಬಿಜೆಪಿ ಬೆಂಬಲ ಕೊಡುತ್ತದೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES