Monday, December 23, 2024

ದೇಶದಲ್ಲಿ ಮೋದಿ ಗ್ಯಾರಂಟಿ ಮಾನ್ಯವಾಗಿದೆ : ಪ್ರಧಾನಿ ಮೋದಿ

ಮಧ್ಯಪ್ರದೇಶ : ‘ನಾನು ಏನು ಹೇಳುತ್ತೇನೆಯೋ .. ಅದನ್ನ ನಾನು ಮಾಡುತ್ತೇನೆ. ಹಾಗಾಗಿ ನನ್ನ ಗ್ಯಾರಂಟಿ ಮಾನ್ಯವಾಗಿದೆ. ನಾನು ಇದನ್ನು ಗಾಳಿ ಮಾತಿಗೆ ಹೇಳುತ್ತಿಲ್ಲ, ಇದು ಕಳೆದ 9 ವರ್ಷಗಳಲ್ಲಿ ನನ್ನ ಟ್ರ್ಯಾಕ್ ರೆಕಾರ್ಡ್ ಆಗಿದೆ. ದೇಶದಲ್ಲಿ ಎಲ್ಲ ಗ್ಯಾರಂಟಿಗಳ ಜಾರಿಗೂ ಮೋದಿಯೇ ಗ್ಯಾರಂಟಿ’ ಎಂದು ಕಾಂಗ್ರೆಸ್​ಗೆ ಪ್ರಧಾನಿ ನರೇಂದ್ರ ಮೋದಿ ತಿರುಗೇಟು ನೀಡಿದರು.

ಮಧ್ಯಪ್ರದೇಶದ ಭೋಪಾಲ್‌ನ ಜಾಂಬೋರಿ ಮೈದಾನದಲ್ಲಿ ಬಿಜೆಪಿಯ ‘ಕಾರ್ಯಕರ್ತ ಮಹಾಕುಂಬ್’ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು.

ಇಂದು ಮಹಿಳಾ ಮೀಸಲಾತಿ ಬಗ್ಗೆ ಮಾತನಾಡುವ ಕಾಂಗ್ರೆಸಿಗರು 30 ವರ್ಷಗಳ ಹಿಂದೆಯೇ ಈ ಕೆಲಸವನ್ನು ಮಾಡಬಹುದಿತ್ತು. ಅವಕಾಶ ಸಿಕ್ಕಾಗಲೆಲ್ಲ ಮಾಡಬಹುದು. ಸತ್ಯ ಏನೆಂದರೆ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಸಿಗಬೇಕು ಎಂದು ಕಾಂಗ್ರೆಸ್ ಎಂದಿಗೂ ಬಯಸಲಿಲ್ಲ ಎಂದು ಚಾಟಿ ಬೀಸಿದರು.

ದುರಹಂಕಾರಿ ಮೈತ್ರಿಕೂಟ ಸೋಲನುಭವಿಸುತ್ತೆ

ಸನಾತನ ಸಂಸ್ಥೆಯನ್ನು ಬೇರು ಸಮೇತ ನಾಶಪಡಿಸುತ್ತೇವೆ ಅಂತ ದುರಹಂಕಾರಿ I.N.D.I.A ಮೈತ್ರಿಕೂಟ ಘೋಷಿಸಿದೆ. ನಮ್ಮ ಅಸ್ಮಿತೆಯನ್ನು ಅಳಿಸಿ ಹಾಕುತ್ತದೆ. ಆದರೆ, ರಾಜಸ್ಥಾನದ ಸಮಾಜವು ಕೆಲವೇ ಮತಗಳಿಗಾಗಿ ತುಷ್ಟೀಕರಣದ ಪರಮಾವಧಿಯನ್ನು ಚೆನ್ನಾಗಿ ಅರ್ಥಮಾಡಿಕೊಂಡಿದೆ. ರಾಜಸ್ಥಾನದ ಈ ಚುನಾವಣೆಯಷ್ಟೇ ಅಲ್ಲ, ಮುಂದೆ ಬರುವ ಪ್ರತಿ ಚುನಾವಣೆಯಲ್ಲೂ ದುರಹಂಕಾರಿ ಮೈತ್ರಿಕೂಟ ಸೋಲನುಭವಿಸುತ್ತದೆ. ಈ ಮೈತ್ರಿಕೂಟವನ್ನು ಕಿತ್ತುಹಾಕಲಾಗುವುದು ಎಂದು ಗುಡುಗಿದರು.

ಕಾಂಗ್ರೆಸ್  ಶೂನ್ಯ ಅಂಕಕ್ಕೆ ಮಾತ್ರ ಅರ್ಹ

ರಾಜಸ್ಥಾನದ ಜನತೆ ಕಾಂಗ್ರೆಸ್‌ನ ದುರಾಡಳಿತದಿಂದ ಮುಕ್ತಿ ಪಡೆಯಬೇಕೆಂಬ ಕೂಗು ಎಬ್ಬಿಸಿದ್ದಾರೆ. ಕಳೆದ 5 ವರ್ಷಗಳಲ್ಲಿ ಇಲ್ಲಿ ಕಾಂಗ್ರೆಸ್ ಸರ್ಕಾರ ನಡೆಸಿದ ರೀತಿ ಶೂನ್ಯ ಅಂಕಕ್ಕೆ ಮಾತ್ರ ಅರ್ಹವಾಗಿದೆ. ಅಶೋಕ್ ಗೆಹ್ಲೋಟ್ ಸರ್ಕಾರ ಇಲ್ಲಿನ ಯುವಕರ ಅಮೂಲ್ಯ 5 ವರ್ಷಗಳನ್ನು ವ್ಯರ್ಥ ಮಾಡಿದೆ. ಹೀಗಾಗಿ, ರಾಜಸ್ಥಾನದ ಜನತೆ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆದು ಬಿಜೆಪಿಯನ್ನು ಮರಳಿ ತರಲು ನಿರ್ಧರಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

RELATED ARTICLES

Related Articles

TRENDING ARTICLES