Sunday, December 22, 2024

ಪ್ರತಿ ಬಾರಿಯೂ ನಮಗೆ ಅನ್ಯಾಯ ಆಗಿದೆ : ನಟ ವಿನೋದ್ ರಾಜ್

ಮಂಡ್ಯ : ಕೃಷಿ ಮಾಡ್ತಾ.. ಮಾಡ್ತಾ ನೀರಿನ ಅಭಾವ ತಿಳಿಯಿತು. ಪ್ರತಿ ಬಾರಿಯೂ ನಮಗೆ ಅನ್ಯಾಯ ಆಗಿದೆ. ಸಂಕಷ್ಟ ಸೂತ್ರ ಅನಿವಾರ್ಯವಿದೆ ಎಂದು ನಟ ವಿನೋದ್ ರಾಜ್ ಬೇಸರ ವ್ಯಕ್ತಪಡಿಸಿದರು.

ಮಂಡ್ಯದಲ್ಲಿ ಕಾವೇರಿ ಹೋರಾಟದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾವು ಕ್ಷೇಮವಾಗಿದ್ದರೆ ಇನ್ನೊಬ್ಬರ ಕ್ಷೇಮ ವಿಚಾರಿಸಬಹುದು. ನಾವು ಕ್ಷಾಮವಾದಾಗ ಇನ್ನೊಬ್ಬವರ ಕ್ಷೇಮ ಕೇಳಲು ಆಗಲ್ಲ. ಕಾನೂನಿಗಿಂತ ನಾವು ದೊಡ್ಡವರಲ್ಲ ಎಂದರು.

ಸುಪ್ರೀಂ ಕೋರ್ಟ್​ ಹಾಗೂ ಪ್ರಾಧಿಕಾರ ವಾಸ್ತವ ಸ್ಥಿತಿ ನೋಡಿ ಆದೇಶ ಮಾಡಬೇಕು. ನೀರಿಲ್ಲ.. ನೀರಿಲ್ಲ ಅಂತ ಹೋರಾಡುತ್ತಿದ್ದೇವೆ. ಹೋರಾಟಕ್ಕೆ ಬೆಲೆ ಇಲ್ಲದಂತಾಗಿದೆ. ಅರಣ್ಯ ಇಲಾಖೆಯಿಂದಲೂ ರೈತರಿಗೆ ಸಮಸ್ಯೆ ಇದೆ. ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಆಗಬಾರದು. ರೈತರ ಹೋರಾಟಕ್ಕೆ ಜಯ ಸಿಗಬೇಕು. ತಾಯಿ ಭುವನೇಶ್ವರಿಯಲ್ಲಿ ನೀರಿನ ಸಮಸ್ಯೆ ಬಾರದಂತೆ ಪ್ರಾರ್ಥಿಸುತ್ತೇನೆ ಎಂದು ಹೇಳಿದರು.

ನನ್ನ ತಾಯಿ ವಿಶ್ವೇಶ್ವರಯ್ಯನವರನ್ನು ಪೂಜಿಸುತ್ತಿದ್ರು. ನನ್ನ ಮಗನಿಗೆ ಅವರ ಅಲ್ಪ ಸ್ವಲ್ಪ ಬುದ್ದಿ ಬರಲೆಂದು. ಅದಕ್ಕೆ ನಾನು ಎಲ್ಲವನ್ನೂ ಬಿಟ್ಟು ರೈತನಾಗಿಬಿಟ್ಟೆ ಅನಿಸುತ್ತದೆ ಎಂದು ವಿನೋದ್ ರಾಜ್​ ಅವರು ವಿಶ್ವೇಶ್ವರಯ್ಯ ಬಗೆಗಿನ ಹಾಡು ಹಾಡಿ ಮಾತು ಮುಗಿಸಿದರು.

RELATED ARTICLES

Related Articles

TRENDING ARTICLES