Thursday, January 23, 2025

ಮೋದಿ ಜಾದೂ..! 10 ದಿನಗಳಲ್ಲೇ ವಾಟ್ಸ್ಆಪ್​ನಲ್ಲಿ 53 ಲಕ್ಷ ಫಾಲೋವರ್ಸ್

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ವಾಟ್ಸ್​ಆಪ್ ಚಾನಲ್ ಜನಪ್ರಿಯತೆ ಹೆಚ್ಚುತ್ತಿದೆ. ದಿನೇ ದಿನೆ ಲಕ್ಷಾಂತರ ಮಂದಿ ಹೊಸ ಫಾಲೋಯರ್​ಗಳು ಮೋದಿ ಚಾನೆಲ್​ಗೆ ಸೇರಿಕೊಳ್ಳುತ್ತಿದ್ದಾರೆ.

ಕೇವಲ 10 ದಿನದಲ್ಲಿ ಅವರ ವಾಟ್ಸ್​ಆಪ್ ಕಮ್ಯೂನಿಟಿಗೆ 50 ಲಕ್ಷಕ್ಕೂ ಹೆಚ್ಚು ಮಂದಿ ಸೇರಿದ್ದಾರೆ. ಸೆಪ್ಟೆಂಬರ್ 14ರಂದು ಪ್ರಧಾನಿಗಳು ಮೊದಲ ಬಾರಿಗೆ ವಾಟ್ಸಾಪ್​ಗೆ ಅಡಿ ಇಟ್ಟಿದ್ದರು. ಇವತ್ತು 11 ದಿನಗಳ ಬಳಿಕ ಅವರ ಫಾಲೋಯರ್ಸ್ ಸಂಖ್ಯೆ 53 ಲಕ್ಷ ಮುಟ್ಟಿದೆ.

ಸೋಷಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಅನುಯಾಯಿಗಳ (ಫಾಲೋವರ್ಸ್) ಬಳಗ ಹೊಂದಿರುವ ವಿಶ್ವನಾಯಕರಲ್ಲಿ ಪ್ರಧಾನಿ ಮೋದಿ ಒಬ್ಬರು. ಇವರ ಟ್ವಿಟ್ಟರ್ ಮತ್ತು ಫೇಸ್​ಬುಕ್ ಖಾತೆಗಳಿಗೆ ಬಹಳ ದೊಡ್ಡ ಸಂಖ್ಯೆಯಲ್ಲಿ ಫಾಲೋಯರ್ಸ್ ಇದ್ದಾರೆ. ಈಗ ವಾಟ್ಸ್​ಆಪ್ ಚಾನಲ್​ನಲ್ಲೂ ಅವರ ಜನಪ್ರಿಯತೆ ವೇಗವಾಗಿ ಹೆಚ್ಚುತ್ತಿದೆ.

ಮೋದಿಗೇ ಹೆಚ್ಚು ಫಾಲೋಯರ್ಸ್

ಸೆಪ್ಟೆಂಬರ್ 25ರಂದು ಕಂಡಿರುವ ಮಾಹಿತಿ ಪ್ರಕಾರ, ವಾಟ್ಸ್​ಆಪ್ ಚಾನಲ್​ಗಳ ಪೈಕಿ ಅತಿ ಹೆಚ್ಚು ಫಾಲೋಯರ್ಸ್ ಹೊಂದಿರುವ ವ್ಯಕ್ತಿಗಳ ಸಾಲಿನಲ್ಲಿ ನರೇಂದ್ರ ಮೋದಿ ಬರುತ್ತಾರೆ. ವಾಟ್ಸ್​ಆಪ್, ನೆಟ್​ಫ್ಲಿಕ್ಸ್, ವಿವಿಧ ಕ್ರೀಡಾ ತಂಡಗಳು, ಸುದ್ದಿ ಸಂಸ್ಥೆಗಳು ಚಾನೆಲ್​​​ಗಳಿಗೆ ಹೆಚ್ಚು ಫಾಲೋಯರ್ಸ್ ಇದ್ದಾರೆ.

RELATED ARTICLES

Related Articles

TRENDING ARTICLES