Monday, December 23, 2024

ಒಂದು ಸಾವಿರಕ್ಕು ಹೆಚ್ಚು ಹೊಸ ಮದ್ಯದಂಗಡಿಗಳನ್ನು ಓಪನ್: ಸಚಿವ ಆರ್​.ಬಿ ತಿಮ್ಮಾಪುರ

ಬೆಂಗಳೂರು : ರಾಜ್ಯದ ಪ್ರತಿ ಗ್ರಾಮಪಂಚಾಯ್ತಿಗಳಲ್ಲಿ, ನಗರಗ ಪ್ರದೇಶಗಳಲ್ಲಿ ಹೊಸದಾಗಿ ಮದ್ಯದಂಗಡಿಗಳನ್ನು ತೆರೆಯಲು ಮಾತುಕತೆ ನಡೆಯುತ್ತಿದೆ ಎಂದು ಅಬಕಾರಿ ಸಚಿವ ಆರ್​.ಬಿ ತಿಮ್ಮಾಪುರ ತಿಳಿಸಿದರು.

ಈ ಕುರಿತು ಮಾದ್ಯಮ ಪ್ರತಿಕ್ರಿಯೆ ನಿಡಿರುವ ಅವರು, ಸಾವಿರಕ್ಕು ಹೆಚ್ಚು ಮದ್ಯದಂಗಡಿಗಳನ್ನು ತೆರೆಯುವ ಮೂಲಕ ರಾಜ್ಯದ ಆದಾಯ ಹೆಚ್ಚಿಸಲು ತೀರ್ಮಾನಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಅಕ್ರಮವಾಗಿ ಮದ್ಯ ಮಾರಾಟವಾಗುತ್ತಿದೆ. ಇದರಿಂದ ಗ್ರಾಹಕರಿಗೆ ಹೊರೆಯಾಗುತ್ತಿದೆ. ಇದನ್ನು ತಪ್ಪಿಸುವ ಸಲುವಾಗಿ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಮದ್ಯದಂಗಡಿಗಳನ್ನು ತೆರೆಯಲು ತೀರ್ಮಾನಿಸಲಾಗಿದೆ ಎಂದರು.

ಇದನ್ನೂ ಓದಿ: ಕಾವೇರಿ ವಿಚಾರ: ನಾವು ಮಾತ್ರ ನಿಮ್ಮ ಕಣ್ಣಿಗೆ ಕಾಣೋದಾ: ಡಿಬಾಸ್​ ದರ್ಶನ್​

ರಾಜ್ಯದ ಹೆದ್ದಾರಿಗಳು, ಜನಸಂಖ್ಯೆ ಮತ್ತಿತರ ಕಾರಣಗಳಿಂದಾಗಿ ಕೆಲವೊಂದು ಪ್ರದೇಶಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಿಲ್ಲ ಆದರೂ ಈ ಪ್ರದೇಶಗಳಲ್ಲಿ ಅನಧಿಕೃತವಾಗಿ ಮದ್ಯ ಮಾರಾಟವಾಗುತ್ತಿದೆ. ನಿಗಧಿತ ದರಕ್ಕಿಂತಲೂ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡಲಾಗುತ್ತಿದೆ. ಇವೆಲ್ಲವನ್ನು ತಡೆಯುವ ನಿಟ್ಟಿನಲ್ಲಿ ಮದ್ಯದಂಗಡಿಗಳ ಸಂಖ್ಯೆಯನ್ನು ಹೆಚ್ಚಿಸಲು ತೀರ್ಮಾನಿಸಲಾಗಿದೆ ಎಂದರು.

ಮಂಜೂರಾತಿ ನೀಡಿದ್ದರು ಆರಂಭಗೊಳ್ಳದ ಮದ್ಯದಂಗಡಿಗಳು ಹಲವು ಇದೆ. ನವೀಕರಣಗೊಳ್ಳದ ಪರವಾನಗಿಗಳು ಇವೆ, ಇವೆಲ್ಲದರ ಅಸಮತೋಲನ ನೀಗಿಸಲು ಸಿದ್ದತೆ ನಡೆದಿದೆ ಎಂದು ಅವರು ಹೇಳಿದ್ದಾರೆ.

RELATED ARTICLES

Related Articles

TRENDING ARTICLES