ಬೆಂಗಳೂರು : ಸೆಪ್ಟಂಬರ್ ತಿಂಗಳು ಮುಗಿಯುತ್ತಾ ಬಂದಿದ್ದು, ಅಕ್ಟೋಬರ್ ತಿಂಗಳು ಆರಂಭವಾಗುವ ಸಮಯ ಬಂದಿದೆ. ಇದರ ಜೊತೆಯಲ್ಲೇ ಮುಂದಿನ ತಿಂಗಳಲ್ಲಿ ಬ್ಯಾಂಕ್ ಗಳಿಗೆ ಸಿಕ್ಕಾಪಟ್ಟೆ ರಜೆಗಳಿವೆ.
ಆರ್.ಬಿ.ಐ ಕ್ಯಾಲೆಂಡರ್ ಪ್ರಕಾರ ರಾಜ್ಯದಲ್ಲಿ ಎರಡನೇ ಶನಿವಾರ, ನಾಲ್ಕನೇ ಶನಿವಾರ, ಭಾನುವಾರ ಸೇರಿದಂತೆ ಬರೋಬ್ಬರಿ 10 ರಜೆ ಸಿಗುತ್ತದೆ. 30 ದಿನಗಳಲ್ಲಿ 10 ರಜೆ ಕಳೆದರೆ, 21 ದಿನ ಮಾತ್ರ ಬ್ಯಾಂಕ್ ಕೆಲಸಗಳು ನಡೆಯಲಿವೆ.
ಉದ್ಯಮಿಗಳು ಹಾಗೂ ಸಾರ್ವಜನಿಕರು ಬ್ಯಾಂಕ್ ಸಂಬಂಧಿಸಿದ ಕೆಲಸಗಳು ಆದಷ್ಟು ಬೇಗ ಮುಗಿಸಿಕೊಳ್ಳುವುದು ಸೂಕ್ತ. ಇನ್ನೂ, ಗಾಂಧಿ ಜಯಂತಿ, ದಸರಾ ರಜೆ ಸಹ ಇದ್ದು ಹಲವು ಶಾಲೆಗಳಿಗೆ ಈ ವೇಳೆಗೆ ರಜೆ ಸಿಗಲಿದೆ.
ಹೀಗಿದೆ ರಜೆಗಳ ದಿನಾಂಕ
- ಅಕ್ಟೋಬರ್ 1, 8, 15, 22, 29 : ಭಾನುವಾರ
- ಅಕ್ಟೋಬರ್ 14, 25 : ಎರಡನೇ ಮತ್ತು ನಾಲ್ಕನೇ ಶನಿವಾರ
- ಅಕ್ಟೋಬರ್ 2 : ಗಾಂಧಿ ಜಯಂತಿ
- ಅಕ್ಟೋಬರ್ 23 : ಮಹಾನವಮಿ, ಆಯುಧ ಪೂಜೆ
- ಅಕ್ಟೋಬರ್ 24 : ವಿಜಯದಶಮಿ / ದಸರಾ