Friday, December 27, 2024

ಕಪಿಲ್ ದೇವ್ ಕಿಡ್ನ್ಯಾಪ್? : ವಿಡಿಯೋ ವೈರಲ್

ಬೆಂಗಳೂರು : ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ ಕಪಿಲ್ ದೇವ್​ ಅವರನ್ನು ಕಿಡ್ನ್ಯಾಪ್(ಅಪಹರಣ) ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಇಬ್ಬರು ಅಪರಿಚಿತರು ಕಪಿಲ್ ದೇವ್ ಅವರನ್ನು ಅಪಹರಣ ಮಾಡಿ ಎಳೆದುಕೊಂಡು ಹೋಗುತ್ತಿರುವ ವಿಡಿಯೋವನ್ನು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಕೂಡ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ.

‘ನೀವು ಈ ಅಪಹರಣ ವಿಡಿಯೋ ನೋಡಿದ್ದಿರಾ? ಇದು ನಿಜವಲ್ಲ. ಕಪಿಲ್ ದೇವ್​ ಅವರು ಸುರಕ್ಷಿತವಾಗಿದ್ದಾರೆ ಎಂದು ಭಾವಿಸಿದ್ದೇನೆ’ ಎಂದು ಪೋಸ್ಟ್​ ಮಾಡಿದ್ದಾರೆ. ಈ ನಡುವೆ ನೆಟ್ಟಿಗರು ಹಾಗೂ ಅಭಿಮಾನಿಗಳು ಇದು ಜಾಹಿರಾತು ಚಿತ್ರೀಕರಣದ ದೃಶ್ಯ ಎಂದು ಕಮೆಂಟ್ ಮಾಡಿದ್ದಾರೆ.

RELATED ARTICLES

Related Articles

TRENDING ARTICLES