Thursday, December 19, 2024

ಲಂಕಾ ದಹನ.. ಏಷ್ಯನ್ ಗೇಮ್ಸ್​ನಲ್ಲಿ ಭಾರತಕ್ಕೆ ಚಿನ್ನದ ಪದಕ

ಬೆಂಗಳೂರು : ಏಷ್ಯನ್ ಗೇಮ್ಸ್​ನಲ್ಲಿ ಭಾರತಕ್ಕೆ ಎರಡನೇ ಚಿನ್ನದ ಪದಕ ಒಲಿದಿದೆ. ಭಾರತ ಮಹಿಳಾ ಕ್ರಿಕೆಟ್ ತಂಡ ಲಂಕಾ ದಹನ ಮಾಡಿ ಚಿನ್ನದ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದೆ.

ಏಷ್ಯನ್ ಗೇಮ್ಸ್​ನಲ್ಲೇ ಇದೇ ಮೊದಲ ಬಾರಿಗೆ ಕ್ರಿಕೆಟ್ ಸೇರ್ಪಡೆ ಮಾಡಲಾಗಿತ್ತು. ಫೈನಲ್​ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಗೆದ್ದು ಕೌರ್​ ಬಳಗ ಚಿನ್ನದ ಪದಕಕ್ಕೆ ಮುತ್ತಿಕ್ಕಿದೆ.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ 7 ವಿಕೆಟ್​ ನಷ್ಟಕ್ಕೆ 116 ರನ್​ ಗಳಿಸಿತ್ತು. ಸ್ಮೃತಿ ಮಂದಾನ 45 ಎಸೆತಗಳಲ್ಲಿ 46 ರನ್​ ಗಳಿಸಿದರೆ, ಜೆಮಿಮಾ ರೋಡ್ರಿಗಿಸ್ 40 ಎಸೆತಗಳಲ್ಲಿ 42 ರನ್​ ಗಳಿಸಿದರು. ಶ್ರೀಲಂಕಾ ಪರ ಉದೇಶಿಕಾ ಪ್ರಬೋಧನಿ ಹಾಗೂ ಸುಗಂಧಿಕಾ ತಲಾ 2 ವಿಕೆಟ್ ಪಡೆದರು.

ಸಾಧಾರಣ ಟಾರ್ಗೆಟ್ ಬೆನ್ನತ್ತಿದ್ದ ಶ್ರೀಲಂಕಾ 8 ವಿಕೆಟ್​ ಕಳೆದುಕೊಂಡು 97 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಗೆಲುವಿನೊಂದಿಗೆ ಏಷ್ಯನ್​ ಗೇಮ್ಸ್​ನಲ್ಲಿ ಭಾರತ ಎರಡನೇ ಚಿನ್ನಗೆದ್ದು ಬೀಗಿದೆ.

RELATED ARTICLES

Related Articles

TRENDING ARTICLES